ಕೊಪ್ಪಳ: ಸಿಎಂ ಬಸವರಾಜ್ ಬೊಮ್ಮಾಯಿ ಅವ್ರ ಅಧಿಕಾರ ಮುಂದಿನ ವರ್ಷ ಜನವರಿ ಅಂತ್ಯಕ್ಕೆ ಹೋಗುತ್ತದೆ.ಹೀಗಂತ ಬಾಂಬ್ ಸಿಡಿಸಿದ್ದಾರೆ ಮಾಜಿ ಸಚಿವ ಶಿವರಾಜ್ ತಂಗಡಗಿ.
ನಮ್ಮ ಬಳಿ ಸ್ಪಷ್ಟವಾದ ಮಾಹಿತಿ ಇದೆ. ಜನವರಿ ಅಂತ್ಯಕ್ಕೆ ಬಸವರಾಜ್ ಬೊಮ್ಮಾಯಿ ಸಿಎಂ ಸ್ಥಾನದಿಂದ ಇಳಿಯುತ್ತಾರೆ. ಸಿಎಂ ಬದಲಾವಣೆ 100 ಕ್ಕೆ ನೂರಷ್ಟು ಸತ್ಯ. ಬಸವರಾಜ್ ಬೊಮ್ಮಾಯಿ ಬಳಿಕ ಮತ್ತಿಬ್ಬರು ಸಿಎಂ ಆಗ್ತಾರೆ. ಬಿಜೆಪಿಗೆ ಸಿಂಗಲ್ ಆಗಿ ಅಧಿಕಾರ ಮಾಡೋಕೆ ಬರೋದೇ ಇಲ್ಲ ಬಿಜೆಪಿ ಸರ್ಕಾರ ಈ ಹಿಂದೆ ಮೂವರನ್ನ ಮುಖ್ಯಮಂತ್ರಿ ಮಾಡಿತ್ತು. ಈ ಸಲ ನಾಲ್ವರು ಮುಖ್ಯಮಂತ್ರಿಗಳಾಗುತ್ತಾರೆ ಎಂದು ಟೀಕಿಸಿದ್ದಾರೆ.
ಬಿಟ್ ಕಾಯಿನ್ ವಿಚಾರವನ್ನ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಮಾತನಾಡುತ್ತಾರೆ. ಬಿಟ್ ಕಾಯಿನ್ ವಿಚಾರದಲ್ಲಿ ಈಗಾಗಲೇ ಅನೇಕ ಚರ್ಚೆಗಳಾಗುತ್ತಿವೆ.ಈ ಬಗೆಗಿನ ದೂರು ದಾಖಲೆಯ ಪ್ರತಿ ಕೊಡಿ ಎಂದು ನಮ್ಮ ನಾಯಕರು ಕೇಳುತ್ತಿದ್ದಾರೆ. ಇದರ ಬಗ್ಗೆ ಭಯ ಇರೋದ್ರಿಂದಲೇ ಅವರು ದೂರು ಪ್ರತಿ ಕೊಡ್ತಿಲ್ಲ.
ಆರೋಪ ಮಾಡುವವರೇ ಸಾಕ್ಷಿ ಕೊಡೋದಾದ್ರೇ ಸರ್ಕಾರ ಯಾಕೆ ಬೇಕು. ನಾವೇ ಬಂದು ಅಧಿಕಾರ ಮಾಡ್ತೀವಿ ಎಂದು ತಿವಿದಿದ್ದಾರೆ ಮಾಜಿ ಸಚಿವ ಶಿವರಾಜ್ ತಂಗಡಗಿ.
PublicNext
11/11/2021 09:57 am