ವರದಿ - ಗಣೇಶ್ ಹೆಗಡೆ
ಬೆಂಗಳೂರು - ವಯಸ್ಕರ ಶಿಕ್ಷಣ ಪದ ಬಳಕೆ ಸಚಿವ ಬಿ.ಸಿ.ನಾಗೇಶ್ ಪೀಕಲಾಟಕ್ಕೆ ಸಿಲುಕಿಸಿದ ಪ್ರಸಂಗ ನಡೆಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕ ಸಹಯೋಗದಲ್ಲಿ ರಾಜ್ಯ ಶಿಕ್ಷಣ ನೀತಿ-೨೦೨೦ರ ಕುರಿತು ಹಮ್ಮಿಕೊಂಡ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಈ ಪ್ರಸಂಗ ಜರುಗಿತು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಸಮಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ನಾಗೇಶ್ ರವರು ವಯಸ್ಕರ ಶಿಕ್ಷಣ ಪದ ಹೇಳಲು ಅಗದೇ ತಡವರಿಸಿದರು.
ಪಕ್ಕದಲ್ಲಿದ್ದ ಅಧಿಕಾರಿಗಳತ್ತ ಕಣ್ಣಾಯಿಸಿ ಕೇಳಿ ತಿಳಿದು ನಂತರ ಸರಿಯಾಗಿ ಉಚ್ಛಾರಣೆಯನ್ನು ಸಚಿವರು ಮಾಡಿದರು.
PublicNext
10/11/2021 05:47 pm