ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆರ್‌ಎಸ್‌ಎಸ್ ಪ್ರಮುಖ ಮುಕುಂದ್ ಭಾನುವಾರ ಭೇಟಿಯಾಗಿದ್ದಾರೆ. ಈ ಭೇಟಿಯು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಧಾರವಾಡದಲ್ಲಿ ಮೂರು ದಿನಗಳ ಕಾಲ ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿ ಬೈಠಕ್ ನಡೆದ ಒಂದು ವಾರದ ಬಳಿಕ ಈ ಭೇಟಿ ನಡೆದಿದೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸ ರೇಸ್ ವ್ಯೂನಲ್ಲಿ ಈ ಸಮಾಗಮವಾಗಿದೆ. ಸಚಿವ ಸಂಪುಟ ಸಭೆ ಸೋಮವಾರ ನಿಗದಿಯಾಗಿದ್ದು, ಈ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆದಿದ್ದು, ಪ್ರಸ್ತುತ ವಿದ್ಯಮಾನಗಳು, ಸರ್ಕಾರದ ನೀತಿ-ನಿರ್ಧಾರ ಸೇರಿದಂತೆ ಸಂಘಟನೆ ಹಾಗೂ ರಾಜಕೀಯ ಮಹತ್ವದ ವಿಚಾರಗಳು ಪ್ರಸ್ತಾಪವಾಗಿವೆ ಎಂದು ಮೂಲಗಳು ತಿಳಿಸಿವೆ.
PublicNext
07/11/2021 05:40 pm