ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಿದ್ರೆ ನಾವೇನು ಅಂತ ತೋರಿಸ್ತಿದ್ವಿ: ಡಿಕೆಶಿ

ಬೆಂಗಳೂರು: ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಿದ್ದಾರೆ ಕಾಂಗ್ರೆಸ್ ಶಕ್ತಿ ಏನು ಅಂತ ನಾವು ತೋರಿಸ್ತಾ ಇದ್ವಿ. ಬಿಜೆಪಿಯವರು ಈ ಹೆಸರನ್ನು ಬದಲಾಯಿಸಲು ಹೊರಟಿದ್ದರು. ನಂತರ ಹೆದರಿ ನಿರ್ಧಾರದಿಂದ ಹಿಂದೆ ಸರಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಜಪೇಯಿಯವರು ಇಂದಿರಾ ಗಾಂಧಿಯನ್ನು ದುರ್ಗೆಗೆ ಹೋಲಿಸಿದ್ದರು. ಪೆನ್ಷನ್, ಸೈಟ್, ಮನೆ ಯೋಜನೆಗಳನ್ನು ಇಂದಿರಾ ಗಾಂಧಿ ಜಾರಿ ಮಾಡಿದ್ದರು. ಅಂಗನವಾಡಿ, ಬಿಸಿಯೂಟ, ಎಲ್ಲಾರಿಗೂ ಉತ್ತೇಜನ ಕೊಡೋ ಕಾರ್ಯಕ್ರಮ ಕೊಟ್ಟಿದ್ದಾರೆ. ಬಡತನ, ಜಾತಿ ವ್ಯವಸ್ಥೆ ಸರಿ ಮಾಡಬೇಕು ಎಂದಿದ್ದರು. ಸಾಮಾಜಿಕ ಬದ್ಧತೆ ಬಗ್ಗೆ ತಿಳಿಹೇಳುವ ಕೆಲಸ ಮಾಡಿದ್ದರು ಎಂದು ಇಂದಿರಾ ಗಾಂಧಿ ಅವರನ್ನು ಇಂದಿರಾಆ ಅವರನ್ನು ಗುನಗಾಣ ಮಾಡಿದರು.

Edited By : Nagaraj Tulugeri
PublicNext

PublicNext

31/10/2021 07:16 pm

Cinque Terre

59.31 K

Cinque Terre

27

ಸಂಬಂಧಿತ ಸುದ್ದಿ