ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡತ ವಿಲೇವಾರಿ ಕೆಲಸ ಚುರುಕು : ರದ್ದಿಯಿಂದ 4 ಕೋಟಿ ರೂ. ಆದಾಯ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸೂಚನೆ ಮೇರೆಗೆ ಎಲ್ಲ ಸರಕಾರಿ ಕಚೇರಿ, ಸಂಸದರ ಕಚೇರಿಗಳಲ್ಲಿ ವರ್ಷಾನುಗಟ್ಟಲೆಯಿಂದ ಮೂಲೆ ಸೇರಿದ ಕಡತಗಳಿಗೆ ಮುಕ್ತಿ ಸಿಕ್ಕಿದೆ. ಕಡತ ಯಜ್ಞ ಅ. 2ರಿಂದ ನಡೆಯುತ್ತಿದ್ದು, ಸದ್ಯದಲ್ಲೇ ಪೂರ್ತಿಯಾಗಲಿದೆ. ನಾನಾ ಕಚೇರಿಗಳಲ್ಲಿ ರಾಷ್ಟ್ರಪತಿ ಭವನದ ಎರಡು ಪಟ್ಟು ಜಾಗ ಅಂದರೆ ಸುಮಾರು 4 ಲಕ್ಷ ಚದರ ಅಡಿ ಜಾಗ ಉಪಯೋಗಕ್ಕೆ ಸಿಗಲಿದೆ. ದೇಶದ ಇತಿಹಾಸದಲ್ಲೇ ಇಷ್ಟು ದೊಡ್ಡಮಟ್ಟದ ಕಡತ ಯಜ್ಞ ಇದೇ ಮೊದಲು ಎನ್ನಲಾಗಿದೆ.

“ಕಡತ ಯಜ್ಞ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಶೇ. 78ರಷ್ಟು ವಿಲೇವಾರಿಯಾಗಿ 3.18 ಲಕ್ಷ ಚದರಡಿ ಜಾಗ ತೆರವಾಗಿದೆ. ಸರಾಗವಾಗಿ ವಿಲೇವಾರಿಯಾಗಬಲ್ಲಂಥ 9,31,442 ಕಡತಗಳನ್ನು ಗುರುತು ಮಾಡಲಾಗಿದ್ದು, ಅವು ಕೂಡ ಈ ಮಾಸಾಂತ್ಯದ ಹೊತ್ತಿಗೆ ಮುಕ್ತಿಪಡೆಯಲಿವೆ.

ನನೆಗುದಿಗೆ ಬಿದ್ದಿದ್ದ ಪ್ರತಿಯೊಂದು ಕಡತಗಳು ವಿಲೇವಾರಿ ಯಾಗಿರುವುದಕ್ಕೆ ಪತ್ರವೊಂದನ್ನು ಸಿದ್ಧಪಡಿಸಿ, ಆ ಸಚಿವಾಲಯಗಳ ಸಚಿವರು ಸಹಿ ಹಾಕಿ ಕಳುಹಿಸಬೇಕಿದೆ. ವಿಲೇವಾರಿಗೊಂಡ ಹಳೆಯ ಕಡತಗಳನ್ನು ರದ್ದಿಗೆ ಹಾಕಿದ್ದರಿಂದ ಸುಮಾರು 4.29 ಕೋಟಿ ರೂ. ಆದಾಯವೂ ಸರಕಾರಕ್ಕೆ ಬಂದಿದೆ. ಈ ವಿಚಾರದಲ್ಲಿ ಹೆಚ್ಚು ಆದಾಯ ಬಂದಿರುವುದು ಕೇಂದ್ರ ಪರಿಸರ ಇಲಾಖೆಯಿಂದ.

ಆ ಇಲಾಖೆ ಯಿಂದಲೇ ಅತೀ ಹೆಚ್ಚು (99,000) ಕಡತ ಗಳನ್ನು ರದ್ದಿಗೆ ಹಾಕಲಾಗಿದೆ. ಅನಂತರದ ಸ್ಥಾನ ದಲ್ಲಿ ಕೇಂದ್ರ ಗೃಹ ಇಲಾಖೆ (81,000), ರೈಲ್ವೇ ಇಲಾಖೆ (80,000), ಸಿಬಿಐ ಹಾಗೂ ಕೇಂದ್ರ ನೇರ ತೆರಿಗೆಗಳ ಮಂಡಳಿ (ತಲಾ 50,000) ಇವೆ.

Edited By : Nirmala Aralikatti
PublicNext

PublicNext

28/10/2021 09:23 am

Cinque Terre

35.69 K

Cinque Terre

1

ಸಂಬಂಧಿತ ಸುದ್ದಿ