ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುಣ್ಯಕ್ಕೆ ಮೋದಿ ಇದ್ದಾರೆ, ಹೀಗಾಗಿ ನಾವಿನ್ನೂ ಬದುಕಿದ್ದೇವೆ: ಶ್ರೀರಾಮುಲು

ಕೊಪ್ಪಳ: ಕಾಂಗ್ರೆಸ್‌ನವರು ಸುಳ್ಳಿನ ಫ್ಯಾಕ್ಟರಿ ಇಟ್ಕೊಂಡು ರಾಜಕಾರಣ ಮಾಡ್ತಿದ್ದಾರೆ. ನಾವು ಇನ್ನೂ ಸಂಪೂರ್ಣ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಗುರಿ ತಲುಪಿಲ್ಲ. ಅದಕ್ಕೆ ಕಾಂಗ್ರೆಸ್‌ನವರೇ ಕಾರಣ. ಕಾಂಗ್ರೆಸ್‌ನವರು ಕೊರೊನಾ ಲಸಿಕೆಯನ್ನು ಡಿಸ್ಟಲ್ ವಾಟರ್ ಎಂದರು. ಮತ್ತು ಅಪಪ್ರಚಾರ ಮಾಡಿದ್ದಾರೆ. ಹೀಗಾಗಿ ಕೆಲ ಜನರು ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ವ್ಯಾಕ್ಸಿನೇಷನ್ ವಿಚಾರವಾಗಿ ಬಹುದೊಡ್ಡ ಭ್ರಷ್ಟಾಚಾರವೇ ನಡೆಯುತ್ತಿತ್ತು. ಪುಣ್ಯಕ್ಕೆ ಮೋದಿ ಇದ್ದಾರೆ. ಹೀಗಾಗಿ ನಾವೆಲ್ಲ ಇನ್ನೂ ಬದುಕಿದ್ದೀವಿ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿಯ ಪಂಪಾ ಸರೋವರ ಬಳಿ ಮಾತನಾಡಿದ ಅವರು 100 ಕೋಟಿ ವ್ಯಾಕ್ಸಿನ್ ಹಾಕಿಸಲು ಮೋದಿ ಕಾರಣ.‌ ಕಾಂಗ್ರೆಸ್‌ನವರು ನಾಟಕ ಕಂಪನಿ ಬಂದ್ ಮಾಡಬೇಕು. ವ್ಯಾಕ್ಸಿನ್ ಬಗ್ಗೆ ಅಪನಂಬಿಕೆ ಹರಡಿದ ಕಾಂಗ್ರೆಸ್ ನಾಯಕರು ರಾತ್ರೋ ರಾತ್ರಿ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬಂದಿದ್ದಾರೆ. ಭಾರತದಲ್ಲಿ 130 ಕೋಟಿ ಜನ ಇದ್ದಾರೆ. ಈಗಾಗಲೇ ನೂರು ಕೋಟಿ ಜನರಿಗೆ ಪ್ರಧಾನಿ ಮೋದಿ ವ್ಯಾಕ್ಸಿನ್ ಕೊಟ್ಟಿದ್ದಾರರೆ. ಇದನ್ನು ನಾವು ಹೊಗಳಬೇಕು. ಆದ್ರೆ ಕೆಲವರು ಅದನ್ನ ಟೀಕೆ ಮಾಡುತ್ತಿದ್ದಾರೆ ಇದು ಅವರ ಸಣ್ಣತನ ಎಂದು ಶ್ರೀರಾಮುಲು ಟೀಕಿಸಿದರು.

Edited By : Nagesh Gaonkar
PublicNext

PublicNext

25/10/2021 09:01 pm

Cinque Terre

48.67 K

Cinque Terre

6

ಸಂಬಂಧಿತ ಸುದ್ದಿ