ಜಮ್ಮು-ಕಾಶ್ಮೀರ: ಇಲ್ಲಿಯ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಇವತ್ತಿನ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡೋ ಮುನ್ನವೇ, ಮನೋಜ್ ಒಂದು ಸ್ಟ್ರಾಂಗ್ ನಿರ್ಧಾರ ತೆಗೆದುಕೊಂಡ್ರು. ಅದನ್ನ ಕಂಡರೆ ವ್ಹಾರೆ ವಾ ಅನ್ನೋ ಥರದ ಕೆಲಸ ಅದು. ಹೌದು. ಶ್ರೀನಗರದಂತ ಜಾಗದಲ್ಲಿ ಬುಲೆಟ್ ಪ್ರೂಫ್ ಗ್ಲಾಸ್ ಇರೋ ಪೋಡಿಯಂ ಅಲ್ಲಿಯೇ ಎಲ್ಲರೂ ಮಾತನಾಡೋಕೆ ಇಷ್ಟಪಡ್ತಾರೆ. ಆದರೆ ಮನೋಜ್ ಸಿನ್ಹಾ ಆ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಪೋಡಿಯಂಗೆ ಇದ್ದ ಬುಲೆಟ್ ಪ್ರೂಫ್ ಗ್ಲಾಸ್ ಅನ್ನ ತಾವೆ ನಿಂತು ತೆಗೆಸಿದ್ದಾರೆ. ಬಳಿಕವೇ ಜನರನ್ನ ಉದ್ದೇಶಿಸಿ ಮಾತನಾಡಿದ್ದಾರೆ. ಆ ವೀಡಿಯೋ ಈಗ ಹೆಚ್ಚು ಗಮನ ಸೆಳೆಯುತ್ತಿದೆ.
PublicNext
25/10/2021 04:56 pm