ಹಾನಗಲ್: ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಈ ದೇಶದ ಬಡವರು ರೈತರ ಹಾಗೂ ಕೂಲಿ ಕಾರ್ಮಿಕರ ರಕ್ತ ಕುಡಿಯುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹಾನಗಲ್ ಕ್ಷೇತ್ರದ ಮಾರನಬಿಡ ಗ್ರಾಮದಲ್ಲಿ ಚುನಾವಣಾ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಬರೀ ಸುಳ್ಳು ಹೇಳುತ್ತಿದ್ದಾರೆ. ಇತಂಹ ಕೆಟ್ಟ ಸರ್ಕಾರ ಇರಬೇಕು ಏನ್ರೀ.? ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರು ಮೋದಿಯಂತಹ ಪ್ರಧಾನಿ ಹಿಂದೆಂದೂ ಬಂದಿಲ್ಲ ಅಂತಾರೆ. ಅವರು ಈಗ ತಿರುಪತಿ ತಿಮ್ಮಪ್ಪನ ನಾಮ ಹಾಕಿದ್ದಾರೆ. ನಾನು ಯಾವಗಲೂ ಸತ್ಯವನ್ನೇ ಮಾತನಾಡುತ್ತೇನೆ. ಗೋಣಿ ಚೀಲವನ್ನು ಬಿಡದ ವ್ಯಕ್ತಿ ಶಿವರಾಜ್ ಸಜ್ಜನರ್ ಯಾವುದೇ ಕಾರಣಕ್ಕೂ ಶಾಸಕನಾಗಬಾರದು. ಬೊಮ್ಮಾಯಿ ಜನರ ಕೃಪಾಕಟಾಕ್ಷದಿಂದ ಸಿಎಂ ಆಗಿಲ್ಲ. ಬದಲಾಗಿ RSS ಕೃಪಾಕಟಾಕ್ಷದಿಂದ ಸಿಎಂ ಆಗಿದ್ದಾರೆ. ಅವರು ಏನೇನು ಅಭಿವೃದ್ಧಿ ಮಾಡಿದ್ದಾರೆಂಬ ಬಗ್ಗೆ ಬಹಿರಂಗ ಚರ್ಚೆಗೆ ಬರಲು ಆಹ್ವಾನಿಸಿದ್ದೆ. ಆದ್ರೆ ಬೊಮ್ಮಾಯಿ ಅವರು ಒಂದೇ ವೇದಿಕೆಗೆ ಬರಲು ಹೆದರುತ್ತಿದ್ದಾರೆ. ಯಾಕಂದ್ರೆ ನನ್ನ ಎದುರು ಸುಳ್ಳು ಹೇಳೋಕೆ ಆಗಲ್ಲ ಎಂದ ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ಅವರಿಗೆ ಮತ್ತೊಮ್ಮೆ ಸವಾಲು ಹಾಕಿದ್ದಾರೆ.
PublicNext
23/10/2021 07:05 pm