ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ದೇಶದ ಸಾಧನೆ ಕೊಂಡಾಡುವ ಮಾನಸಿಕತೆ ಕಳೆದುಕೊಂಡಿದೆ- ಪ್ರಹ್ಲಾದ್ ಜೋಶಿ ಕಿಡಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ದೇಶದ ಸಾಧನೆ ಕೊಂಡಾಡುವ ಮಾನಸಿಕತೆ ಕಳೆದುಕೊಂಡಿದೆ. ಒಂದು ದೇಶವಾಗಿ 100 ಕೋಟಿ ವ್ಯಾಕ್ಸಿನ್ ಗುರಿ ಮುಟ್ಟಿದ್ದು ದೊಡ್ಡ ಸಾಧನೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು,9 ತಿಂಗಳ ಅವಧಿಯಲ್ಲಿ ನೂರು ಕೋಟಿ‌ ಜನರಿಗೆ ನಾವು ವ್ಯಾಕ್ಸಿನ್ ಕೊಟ್ಟಿದ್ದು ಜಗತ್ತೇ ಕೊಂಡಾಡಿದೆ. ಬಿಲ್ ಗೇಟ್ಸ್ ಸಹಿತ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇಂಥ ನಾಯಕರು ಇರುವುದು ನಮ್ಮ ದೇಶದ ಸೌಭಾಗ್ಯ. ಇಡಿ ಜಗತ್ತಿನಲ್ಲಿ 700 ಕೋಟಿ ವ್ಯಾಕ್ಸಿನ್ ಆಗಿದೆ ಅದರಲ್ಲಿ 100ಕೋಟಿ ಭಾರತದಲ್ಲಾಗಿದೆ. ಸಿದ್ದರಾಮಯ್ಯನವರು ಹಾಗೂ ಅವರ ಮುಖಂಡರು ರಾಹುಲ್ ಗಾಂಧಿ ತರಹ ನೀವು ಆಡಬೇಡಿ. ರಾಹುಲ್ ಗಾಂಧಿಗೆ ಅರ್ಥ ಆಗಲ್ಲ, ನೀವು ಯಾಕೆ ಹೀಗೆ ಮಾತಾಡ್ತೀರಿ ಎಂದು ಲೇವಡಿ ಮಾಡಿದರು.

ಮೋದಿ ಅವರಿಗೆ ಈ ಕ್ರೆಡಿಟ್ ಕೊಡಬೇಕು ಅಂತಾ ನಾವು‌ ಬಯಸಿಲ್ಲ,‌‌ ಸ್ವತಃ ಮೋದಿನೇ ಬಯಸಿಲ್ಲ. ದೇಶಕ್ಕೆ ಈ ಕ್ರೆಡಿಟ್ ಕೊಡಿ ಎಂದರು.

ನಳಿನ್ ಕುಮಾರ ಕಟೀಲ್ ರಾಹುಲ್ ಗಾಂಧಿ ಬಗ್ಗೆ ಡ್ರಗ್ ಪೆಡ್ಲರ್ ಹೇಳಿಕೆ‌ಗೆ ಪ್ರತಿಕ್ರಿಯೆ ನೀಡಿದ ಅವರು, ಕಟೀಲ್ ಯಾಕೆ ಈ ರೀತಿ ಮಾತಾಡಿದ್ದಾರೆ ಗೊತ್ತಿಲ್ಲ, ಆದರೆ ಪತ್ರಿಕೆಯಲ್ಲಿ ಬಂದಿದೆ ಎಂದಿದ್ದಾರೆ.ಆ ಬಗ್ಗೆ ನಾನು ಮಾತನಾಡಲ್ಲ.ಕೇವಲ ಕಟೀಲ್ ಅವರು ವೈಯಕ್ತಿಕ ನಿಂದನೆ ಮಾಡಿಲ್ಲ ಸಿದ್ದರಾಮಯ್ಯನವರು‌ ಮೋದಿ ಅವರನ್ನ ಮಾತನಾಡ್ತಾರೆ.ಮೋದಿ‌ ಬಗ್ಗೆ ಏಕವಚನದಲ್ಲಿ ಮಾತನಾಡ್ತಾರೆ. 2014, 18 ಹಾಗೂ 18 ರ ಚುನಾವಣೆಯಲ್ಲಿ ಇವರು ಹೀನಾಯವಾಗಿ ಸೋತಿದ್ದಾರೆ. ಯಾರೇ ಇರಲಿ ಕೆಳ ಮಟ್ಟದ ಟೀಕೆ ಮಾಡಬಾರದು ಇದು ನನ್ನ ವೈಯಕ್ತಿಕ ನಂಬಿಕೆ ಎಂದರು.

ಕಲ್ಲಿದ್ದಲು ಸ್ವಲ್ಪ ಕೊರತೆಯಾಗಿತ್ತು. 2.1 ಮಿಲಿಯನ್ ಪ್ರತಿ ದಿನ ಸಪ್ಲೈ ಮಾಡುತ್ತಿದ್ದೇವೆ. ನಾಲ್ಕು ದಿನಗಳ ಸ್ಟಾರ್ ಇದೆ ಎಂದರು.

ಉಪಚುನಾವಣೆಯಲ್ಲಿ ಎರಡೂ ಕಡೆ ನಾವು ಖಂಡಿತ ಗೆಲ್ತೇವೆ. ನಾನು ಹಾನಗಲ್ ಹೋಗಿ ಬಂದಿದ್ದೇನೆ.ಸಿಂದಗಿ ಹೋಗಿಲ್ಲ. ಅಲ್ಲಿಯ ಕಾರ್ಯಕರ್ತರ ಜೊತೆ ಇನ್ ಚಾರ್ಜ್ ಇದ್ದವರ ಜೊತೆ ಸಂಪರ್ಕದಲ್ಲಿ ಇದ್ದೇನೆ. ಪೆಟ್ರೋಲ್ ಡೀಸೆಲ್ ದರ ಚುನಾವಣೆ ಮೇಲೆ ಎಫೆಕ್ಟ್ ಬೀರೊಲ್ಲ. ಆಗಲೂ ನಮಗೆ‌ ಜನ ಓಟು ಹಾಕಿದ್ದಾರೆ, ‌ಆಸ್ಸಾಂನಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಗೆದ್ದಿದ್ದೇವೆ.ಯಾರು ವಿಶ್ವಾಸಾರ್ಹರು ಎಂದು ಜನರಿಗೆ ಗೊತ್ತಿದೆ ಎಂದರು.

ಬಾಂಗ್ಲಾ‌ದಲ್ಲಿ ಹಿಂದೂಗಳ ಮೇಲಿನ ದಾಳಿಗೆ ಪ್ರತಿಕ್ರಿಯೆ ನೀಡಿದ ಅವರು,ಅಲ್ಲಿನ ಸರ್ಕಾರ ಜೊತೆ ನಮ್ಮ‌ಸರ್ಕಾರ‌‌ ಸಂಪರ್ಕದಲ್ಲಿದೆ.ಅಲ್ಲಿಯ ಸರ್ಕಾರ ಕೂಡಾ ಕ್ರಮ ಕೈಗೊಳ್ಳುತ್ತಿದೆ.ಭಾರತ ಸರ್ಕಾರ ಅಲ್ಲಿಯ ಹಿಂದೂಗಳ ಹಿತ ಕಾಪಾಡಲು ಬದ್ಧವಾಗಿದೆ ಎಂದರು.

ಉಪಚುನಾವಣೆಯಲ್ಲಿ ಹಣ‌ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ,ಇದು ಸುಳ್ಳು ಆರೋಪ.ಕಾಂಗ್ರೆಸ್ ನವರು ಸತ್ಯ ಹರಿಶ್ಚಂದ್ರರಾ. ಕಾಂಗ್ರೆಸ್ ನವರು ಇಷ್ಟೆಲ್ಲ ಟೆಂಟ್ ಹಾಕಿದ್ದಾರೆ. ಅವರು ಹಣ ಖರ್ಚೇ ಮಾಡ್ತಿಲ್ವಾ.ಅಗತ್ಯವಿರುವ ದುಡ್ಡು ಅವರು ಖರ್ಚು ಮಾಡುತ್ತಿದ್ದಾರೆ, ನಾವು ಮಾಡ್ತಿದ್ದೇವೆ ಎಂದರು.

Edited By : Manjunath H D
PublicNext

PublicNext

23/10/2021 01:36 pm

Cinque Terre

92.99 K

Cinque Terre

0

ಸಂಬಂಧಿತ ಸುದ್ದಿ