ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಪುಟ ಸೇರ್ಪಡೆಯಾಗಲು ರಮೇಶ್ ಜಾರಕಿಹೊಳಿ ಟೆಂಪಲ್ ರನ್

ಮಹಾರಾಷ್ಟ್ರ: ಸಂಪುಟ ಸೇರ್ಪಡೆಗಾಗಿಯೇ ದೇವಿಯ ಮೊರೆ ಹೋಗಿದ್ದಾರೆ ರಮೇಶ್ ಜಾರಕಿಹೊಳಿ. ಸಚಿವ ಸ್ಥಾನಕ್ಕಾಗಿ ರಮೇಶ್ ಜಾರಕಿಹೊಳಿ ಟೆಂಪಲ್ ರನ್ ಬಲು ಜೋರಾಗಿಯೇ ಇದೆ. ಈಗ ಮಹಾರಾಷ್ಟ್ರದ ಕೊಲ್ಹಾಪುರ ಮಹಾಲಕ್ಷ್ಮೀ ದೇವಿಯ ದರ್ಶನ ಮಾಡಿದ್ದಾರೆ ರಮೇಶ್ ಜಾರಕಿಹೊಳಿ.

ರಮೇಶ್ ಜಾರಕಿಹೊಳಿ ಅವರಿಗೆ ಸಂಪುಟ ವಿಸ್ತರಣೆಯ ಸುಳಿವು ಸಿಕ್ಕಿದೆ. ಅದಕ್ಕೇನೆ ಕಳೆದ 5 ದಿನದ ಹಿಂದೆ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನೂ ಭೇಟಿಯಾಗಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ. ಇದಲ್ಲದೇ ದೆಹಲಿ ಮಟ್ಟದಲ್ಲೂ ಲಾಬಿ ಮಾಡ್ತಿದ್ದಾರೆ. ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಕಡೆಯಿಂದಲೂ ಹೈಕಮಾಂಡ್ ಮೇಲೆ ಒತ್ತಡ ಹಾಕಿಸೋ ಕಸರತ್ತು ಕೂಡ ಮಾಡಿದ್ದಾರೆ. ಇದರ ಮಧ್ಯೆ ದೇವಿಯ ಕೃಪೆನೂ ಇರಲಿ ಅಂತ ದೇವಸ್ಥಾನಗಳಲ್ಲೂ ಸುತ್ತುತ್ತಿದ್ದಾರೆ ರಮೇಶ್ ಜಾರಕಿಹೊಳಿ.

Edited By :
PublicNext

PublicNext

23/10/2021 11:08 am

Cinque Terre

22.13 K

Cinque Terre

1

ಸಂಬಂಧಿತ ಸುದ್ದಿ