ನವದೆಹಲಿ: ತಮ್ಮೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಕರ್ತವ್ಯನಿರತ ಮಹಿಳಾ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾದ ಉತ್ತರ ಪ್ರದೇಶ ಸರ್ಕಾರವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, "ಈ ಫೋಟೋದಿಂದ ಯೋಗಿ ಜಿ (ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್) ತುಂಬಾ ಅಸಮಾಧಾನಗೊಂಡಿದ್ದಾರೆ ಎಂದು ಸುದ್ದಿ ಬರುತ್ತಿದೆ. ಅವರು ಈ ಮಹಿಳಾ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ನನ್ನೊಂದಿಗೆ ಸೆಲ್ಫಿ, ಫೋಟೋ ತೆಗೆದುಕೊಳ್ಳುವುದು ಅಪರಾಧವಾಗಿದ್ದರೆ, ಅದಕ್ಕಾಗಿ ನನಗೂ ಶಿಕ್ಷೆಯಾಗಬೇಕು. ಈ ಶ್ರಮಜೀವಿ ಮತ್ತು ನಿಷ್ಠಾವಂತ ಪೊಲೀಸರ ವೃತ್ತಿಜೀವನವನ್ನು ಹಾಳು ಮಾಡುವುದು ಸರ್ಕಾರಕ್ಕೆ ಸರಿಹೊಂದುವುದಿಲ್ಲ" ಎಂದು ಕಿಡಿಕಾರಿದ್ದಾರೆ.
ಆಗಿದ್ದೇನು:
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನಿನ್ನೆ (ಬುಧವಾರ) ಆಗ್ರಾಕ್ಕೆ ಹೋಗುವ ಮಾರ್ಗ ಮಧ್ಯೆ ತಡೆದು ಅವರೊಂದಿಗೆ ಜೊತೆ ಮಹಿಳಾ ಪೊಲೀಸರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಸೆಲ್ಫಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಪೊಲೀಸರ ವಿರುದ್ಧ ಪ್ರಾಥಮಿಕ ತನಿಖೆಗೆ ಲಕ್ನೋ ಪೊಲೀಸ್ ಆಯುಕ್ತ ಧ್ರುವ ಕಾಂತ್ ಠಾಕೂರ್ ಆದೇಶಿಸಿದ್ದಾರೆ ಎಂದು ವರದಿಯಾಗಿತ್ತು. ಇದೇ ವಿಚಾರವಾಗಿ ಪ್ರಿಯಾಂಕಾ ಗಾಂಧಿ ಅಸಮಾಧಾನ ಹೊರ ಹಾಕಿದ್ದಾರೆ.
PublicNext
21/10/2021 11:47 am