ಬೆಂಗಳೂರು: ಬೈ ಎಲೆಕ್ಷನ್ ಮತಯಾಚನೆ ಶುರುವಾದಾಗಿನಿಂದಲೂ ರಾಜಕೀಯ ರಂಗದಲ್ಲಿ ಬದಲಾವಣೆಗಳನ್ನು ಕಾಣುವ ಬದಲು ರಾಜಕೀಯ ನಾಯಕರುಗಳ ಪರಸ್ಪರ ಆರೋಪ ಪ್ರತ್ಯಾರೋಪಗಳೇ ಹೆಚ್ಚಾಗಿವೆ. ಸದ್ಯ ಬ್ಲೂ ಫಿಲಂ ಬಗ್ಗೆ ಹೆಚ್ ಡಿಕೆಗೆ ಹೇಗೆ ಗೊತ್ತಾಯ್ತು? ಹೇಗೆ ಕಲಿತ್ಕೊಂಡ್ರು ಅವ್ರು? ಬ್ಲೂ-ಫಿಲಂಗಳ ಬಗ್ಗೆ ಹೆಚ್ ಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ ಎಂದು ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅಶ್ವತ್, ಉಪಚುನಾವಣೆ ಬಂದಾಗ ಕುಮಾರಸ್ವಾಮಿ ಕೂಗುಮಾರಿ ಥರ ಮಾತಾಡ್ತಾರೆ. ಉಪಚುನಾವಣೆಯ ವೇಳೆ ಹೆಚ್ ಡಿಕೆ ಮನಸ್ಥಿತಿ ಕಳ್ಕೊಂಡು ಮಾತಾಡ್ತಾರೆ. ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಹೆಚ್ ಡಿಕೆ ಸ್ಥಿಮಿತ ಕಳ್ಕೊಂಡು ಬೇಜವಾಬ್ದಾರಿ ಹೇಳಿಕೆ ಕೊಡ್ತಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಹೆಚ್ ಡಿಕೆ ಅವರು ಆರ್ ಎಸ್ ಎಸ್ ಶಾಖೆಗೆ ಬ್ಲೂ-ಫಿಲಂ ನೋಡಲು ಬರ್ಲಾ ಎಂದು ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂದು ಕಿಡಿಕಾರಿದರು. ಹೆಚ್ ಡಿಕೆ ಕ್ಷಮೆ ಕೇಳಿ ಹೇಳಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
PublicNext
20/10/2021 03:31 pm