ಹುಬ್ಬಳ್ಳಿ: ಜೀವನ ಪೂರ್ತಿ ತಂದೆ ಮಕ್ಕಳು ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಕುಟುಂಬ ರಾಜಕಾರಣದ ಹಳದಿ ರೋಗ ಬಂದವನಿಗೆ ಎಲ್ಲವೂ ಹಳದಿ ಕಾಣಿಸುತ್ತೆದೆ ಎಂದು, ಕುಮಾರಸ್ವಾಮಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ವ್ಯಂಗವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಆರ್.ಎಸ್.ಎಸ್ ಟೀಕೆ ವಿಚಾರವಾಗಿ, ಕುಮಾರಸ್ವಾಮಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಕೆಪಿಎಸ್ ಸಿ ಯಿಂದ ಹಿಡಿದು ಒಂದು ಇಲಾಖೆಯ ಗುಮಾಸ್ತನವರೆಗೂ ಕುಟುಂಬದವರನ್ನು ಇಟ್ಟಿದ್ದರು. ಮೊದಲು ಕುಮಾರಸ್ವಾಮಿ ಆರ್.ಎಸ್.ಎಸ್ ಶಾಖೆಗೆ ಬರಬೇಕು. ಅವರಿಗೆ ಈಗಾಗಲೇ ಶಾಖೆಗೆ ಬರಲು ಕರೆಕೊಟ್ಟಿದ್ದೇನೆ. ಎರಡು ದಿನ ಶಾಖೆಗೆ ಬರಲಿ, ಶಾಖೆ ಎಂದರೆ ಏನು? ಅದು ಏನು ಕಲಿಸುತ್ತದೆ ಎಂಬುದನ್ನು ಅರಿಯಲಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತವಲ್ಲದೇ ಪ್ರಪಂಚದ 150 ದೇಶದಲ್ಲಿ ಸೇವಾ ಕಾರ್ಯ ಮಾಡುತ್ತಿದೆ. ಪ್ರತಿಯೊಬ್ಬರಲ್ಲೂ ದೇಶಭಕ್ತಿಯ ಜಾಗೃತಿ ಮೂಡಿಸುತ್ತಿದೆ ಎಂದರು.
ಬಿಜೆಪಿ ಪಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸುತ್ತಿದ್ದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯ ಸರ್ವಶ್ರೇಷ್ಠ ನಾಯಕ ಬಿ.ಎಸ್.ಯಡಿಯೂರಪ್ಪ ವರನ್ನು ಕಡೆಗನಿಸುವ ಪ್ರಶ್ನೆ ಇಲ್ಲಾ. ಮುಂದಿನ ಎರಡು ದಿನ ಹಾನಗಲ್ ಪ್ರಚಾರ ಮತ್ತು ಮುಂದಿನ ಎರಡು ದಿನ ಸಿಂಧಗಿಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂದರು.
ಮುಂಬರು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದ ಇಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ಸಿಂಧಗಿ ಪ್ರಚಾರದಲ್ಲಿ ಮುಖ್ಯಮಂತ್ರಿಗಳು ಜೊತೆ ಭಾಗವಹಿಸುತ್ತೆನೆ. ಎರಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸುತ್ತೆ ಎಂದು ವಿಶ್ವಾಸ ವ್ಯಕ್ತವಿಚಾರವಾಗಿ.
PublicNext
19/10/2021 12:49 pm