ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋನಿಯಾ ‘’ಕೈ’’ಯಲ್ಲೇ ಕಾಂಗ್ರೆಸ್ : ಭಿನ್ನಮತೀಯರಿಗೆ ತೀಕ್ಷ್ಣ ಸಂದೇಶ

ನವದೆಹಲಿ: ಕಾಂಗ್ರೆಸ್ ನಾಯಕತ್ವದ ಬಗ್ಗೆ ಆಂತರಿಕ ವಲಯದಲ್ಲಿ ಸೃಷ್ಟಿಯಾಗಿರುವ ಟೀಕೆ-ಟಿಪ್ಪಣಿಗಳಿಗೆ ಅಧಿನಾಯಕಿ ಸೋನಿಯಾ ಗಾಂಧಿ ತಾವು ಪೂರ್ಣಾವಧಿವರೆಗೂ ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಳ್ಳುವ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ನಾನು ಎಐಸಿಸಿ ಹಂಗಾಮಿ ಅಧ್ಯಕ್ಷೆಯಲ್ಲ, ಪೂರ್ಣಾವಧಿಯ ಅಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದೇನೆ, ಏನೇ ಸಮಸ್ಯೆ ಇದ್ದರೂ ನನ್ನ ಬಳಿ ನೇರವಾಗಿ ಚರ್ಚಿಸಿ ಎಂದು ಭಿನ್ನಮತೀಯರಿಗೆ ತೀಕ್ಷ್ಣ ಸಂದೇಶ ಕೊಟ್ಟಿದ್ದಾರೆ.

ಇಂದು ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, G23 ಬಣ ಸೇರಿದಂತೆ ನೂತನ ಅಧ್ಯಕ್ಷರ ಬಗ್ಗೆ ಆಕ್ಷೇಪ ಎತ್ತುತ್ತಿದ್ದ ನಾಯಕರಿಗೆ ಖಡಕ್ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಪುನಶ್ಚೇತನ ಆಗಬೇಕು ಎಂದು ಸೋನಿಯಗಾಂಧಿ, ಸ್ವಯಂ ನಿಯಂತ್ರಣ ಮತ್ತು ಶಿಸ್ತಿನಿಂದ ಸಂಘಟನೆ ಆಗಬೇಕಿದ್ದು, ಪಕ್ಷದ ಹಿತಾಸಕ್ತಿ ನಮ್ಮ ಪರಮೋಚ್ಚ ಧ್ಯೇಯವಾಗಬೇಕಿದೆ ಎಂದು ಹಿರಿಯ ನಾಯಕರಿಗೆ ಹೇಳಿದರು.

Edited By : Nirmala Aralikatti
PublicNext

PublicNext

16/10/2021 05:25 pm

Cinque Terre

55.07 K

Cinque Terre

8

ಸಂಬಂಧಿತ ಸುದ್ದಿ