ಬೆಂಗಳೂರು: ಬಿಜೆಪಿ ವಿರುದ್ಧ ಸೊಗಡು ಶಿವಣ್ಣ ಮಾಡಿದ ಆರೋಪದ ಬಗ್ಗೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಸೊಗಡು ಶಿವಣ್ಣ ಮೆಂಟಲ್ ಆಸ್ಪತ್ರೆಯಲ್ಲಿರಬೇಕಾದವರು. ಅವರ ಬಗ್ಗೆ ನಾನು ಮಾತನಾಡಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸೊಗಡು ಶಿವಣ್ಣ ಮೇಲೆ ವಾಗ್ದಾಳಿ ನಡೆಸಿದ್ದಾರೆ. ತುಮಕೂರಿನಲ್ಲಿ ಯಾವುದಾದರೂ ನನ್ನ ಆಸ್ತಿ ಇದ್ದರೆ ಸೊಗಡು ಶಿವಣ್ಣನಿಗೆ ಗಿಫ್ಟ್ ಕೊಟ್ಟುಬಿಡ್ತೀನಿ. ಆ ಆಸ್ತಿಯನ್ನ ಸೊಗಡು ಶಿವಣ್ಣನೇ ಇಟ್ಟುಕೊಳ್ಳಲಿ. ರಾಜಕೀಯವಾಗಿ ಸೊಗಡು ಶಿವಣ್ಣನಿಗೆ ಜಾಗವಿಲ್ಲ ಹೀಗಾಗಿ ನನ್ನ ವಿರುದ್ಧ ಏನೇನೋ ಮಾತಾಡ್ತಿದ್ದಾನೆ. ಮೊದಲು ಅವನು ರಾಜಕೀಯ ಜಾಗ ಹುಡುಕಿಕೊಳ್ಳಲಿ ಎಂದ ಡಿಕೆಶಿ ಸಿಡಿಮಿಡಿಗೊಂಡರು.
PublicNext
15/10/2021 02:49 pm