ಬೀದರ್: ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಗಾಂಧಿನಗರ ತಾಂಡಾದಲ್ಲಿ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮದಲ್ಲಿ ಪಶು ಸಂಗೊಪನೆ ಹಾಗೂ ಬೀದರ ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಸ್ಟೆಪ್ಸ್ ಹಾಕಿದ್ದಾರೆ. ಸಂತ ಮಾವುಲಿ ತುಕಾರಾಮ ಮಹಾರಾಜರ ಗಾಯನ ಮೇಲೆ ನೃತ್ಯ ಮಾಡಿದ ಸಚಿವರು ಫೂಗಡಿ ಆಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪ್ರಭು ಚೌವಾಣ ನಮ್ಮ ತಾಲ್ಲೂಕಿನಲ್ಲಿ ಸುಮಾರು ತಾಂಡಾಗಳಿವೆ. ಆದರೂ ಕೂಡ ಹರಿನಾಮ ಸಪ್ತಾಹ ಕೇವಲ ಗಾಂಧಿನಗರ ತಾಂಡಾದಲ್ಲಿ ಮಾತ್ರ ಆಗುತ್ತಿದೆ. ಸಪ್ತಾಹ ಕಾರ್ಯಕ್ರಮ ಮಾಡುವದರಿಂದ ನಮ್ಮ ಗ್ರಾಮದಲ್ಲಿ ಸುಖ ಶಾಂತಿ ಮತ್ತು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ತಾಂಡಾದಲ್ಲಿ ಇರುವ ಎಲ್ಲರು ಇದೆ ರೀತಿ ಪ್ರತಿಯೊಂದು ತಾಂಡಾದಲ್ಲಿ ಹರಿನಾಮ ಸಪ್ತಾಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಅಂತ ಹೇಳಿದ್ರು.
PublicNext
15/10/2021 02:19 pm