ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಸುಗುಸು ಮಾತಾಡಿದವರು ನಿಮ್ಮ ಪಟಾಲಂ ಅಲ್ವಾ?: ಸಿದ್ದುಗೆ ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು: ಕಾಂಗ್ರೆಸ್ ವಕ್ತಾರ ವಿ.ಎಸ್ ಉಗ್ರಪ್ಪ ಅವರೊಂದಿಗೆ ಮಾಧ್ಯಮ ಸಂಯೋಜಕ ಸಲೀಂ ಅವರು ಡಿ.ಕೆ ಶಿವಕುಮಾರ್ ನಡೆಸಿದ ಗುಸುಗುಸು ಮಾತು ರಾಜಕೀಯ ಸಂಚಲನವನ್ನೇ ಸೃಷ್ಟಿ ಮಾಡಿದೆ.

ಈ ಘಟನೆ ಬಗ್ಗೆ ಸಿದ್ದರಾಮಯ್ಯ ಕಡೆಗೆ ಬೊಟ್ಟು ಮಾಡಿ ತೋರಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಗುಟ್ಟು ರಟ್ಟು ಮಾಡಿದವರು ನಿಮ್ಮ ಪಟಾಲಂ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಬಗ್ಗೆ ಒಂದು ವಿಡಿಯೋ ಬಂದಿದೆ. ಆ ವಿಡಿಯೋ ನೀವೇ ಬಿಟ್ಟಿದ್ದಾ? ಅಥವಾ ಅವರೇ ಹೇಳಿದ್ದಾ ಗೊತ್ತಿಲ್ಲ. ಅವರೆಲ್ಲ ನಿಮ್ಮ ಪಟಾಲಮ್ ಗಳೇ ಅಲ್ವಾ? ಡಿಕೆಶಿ ಪಕ್ಷ ಕಟ್ಟಲು ದುಡಿಯುತ್ತಿದ್ದಾರೆ. ಹಗಲು-ರಾತ್ರಿ ಓಡಾಡಿಕೊಂಡಿದ್ದಾರೆ. ಅವರನ್ನು ಸಿಎಂ ಮಾಡ್ತೀರಾ ನೀವೆಲ್ಲ? ಸಿದ್ದರಾಮಯ್ಯ ಅವರೇ..2013ರ ಚುನಾವಣೆಯೇ ನನ್ನ‌ ಕೊನೆ ಚುನಾವಣೆ ಎಂದು ತಾವು ಹೇಳಿದ್ರಿ. ಆದ್ರೆ ಈಗ ಇನ್ನೂ ತಮಗೆ ಅಧಿಕಾರದ ಆಸೆ ಹೋಗಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Edited By : Nagaraj Tulugeri
PublicNext

PublicNext

14/10/2021 03:46 pm

Cinque Terre

66.47 K

Cinque Terre

4

ಸಂಬಂಧಿತ ಸುದ್ದಿ