ವೀರ್ ಸಾವರ್ಕರ್ ಎಂದೂ ಬ್ರಿಟಿಷರ ಬಳಿ ಜೈಲಿನಿಂದ ನನ್ನ ಬಿಡಿಸಿ ಅಂತ ಬೇಡಿಕೊಳ್ಳಲಿಲ್ಲ..ಕೇಳಿಕೊಳ್ಳಲಿಲ್ಲ. ಆದರೆ ಈಗಲೂ ಅವರ ಬಗ್ಗೆ ಇಲ್ಲದ ಸಲ್ಲದ ಸುಳ್ಳು ಸುದ್ದಿಗಳೇ ಹರಡುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ವಿನಾಯಕ್ ದಾಮೋದರ್ ಸಾವರ್ಕರ್ ಕುರಿತು ಬರೆದ ಪುಸ್ತಕ ಬಿಡುಗಡೆಗೆ ಬಂದಿದ್ದ ರಾಜನಾಥ್ ಸಿಂಗ್ ಅವ್ರು, ಸಾವರ್ಕರ್ ಬಗ್ಗೆ ಮಾತನಾಡಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ತಮ್ಮನ್ನ ಬಿಡುಗಡೆ ಮಾಡಿ ಅಂತ ಬ್ರಿಟಿಷ್ ಸರ್ಕಾರಕ್ಕೆ ವೀರ್ ಸಾವರ್ಕರ್ ಎಂದೂ ಕರುಣೆ ಅರ್ಜಿ (Mercy Petition) ಹಾಕಲೇ ಇಲ್ಲ. ಹಾಗೆ Mercy Petition ಹಾಕು ಅಂತ ಸಾವರ್ಕರ್ ಅವರಿಗೆ ಹೇಳಿದ್ದು ಮಹಾತ್ಮಾ ಗಾಂಧಿಜಿ ಅವರೇ ಹೇಳಿರೋದು ಹೊರತು, ಸಾವರ್ಕರ್ ಆ ಕೆಲಸ ಮಾಡಲು ಮುಂದಾಗಿರಲಿಲ್ಲ ಅಂತಲೇ ರಾಜನಾಥ್ ಸಿಂಗ್ ತಪ್ಪು ಕಲ್ಪನೆ ಮೇಲೆ ತೆರೆ ಎಳೆಯೋ ಕೆಲಸ ಮಾಡಿದ್ದಾರೆ.
PublicNext
13/10/2021 05:28 pm