ಮಂಗಳೂರು: ಜನ ಇನ್ನಷ್ಟು ಕಾಂಗ್ರೆಸ್ ನ ತಿರಸ್ಕರಿಸ್ತಾರೆ. ಆದರೆ ಬಿಜೆಪಿ ಇವರ ಒಳಜಗಳದ ಲಾಭ ಯಾವತ್ತೂ ಪಡೆಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ತಮ್ಮ ರಾಜಕೀಯ ಸ್ಥಾನ ಭದ್ರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯಈ ರಾಜ್ಯದ ಹಿಟ್ಲರ್. ಅವರಿದ್ದಾಗ ಹಿಂದೂಗಳ ಹತ್ಯೆಯಾಗಿದೆ. ಸಿದ್ದರಾಮಯ್ಯ ಆರ್ ಎಸ್ ಎಸ್ ಗೆ ಬೈದಾಗ ಯೋಚನೆ ಮಾಡಬೇಕಿತ್ತು.
ಸಂಘ ಇಡೀ ಜಗತ್ತಿನಾದ್ಯಂತ ಸಮಾಜ ಸೇವೆ ಮಾಡುತ್ತಿದೆ. ಇವರ ಕಾಂಗ್ರೆಸ್ ಒಂದೇ ಒಂದು ಸೇವಾಕಾರ್ಯ ಮಾಡಿಲ್ಲ. ಸಿದ್ದರಾಮಯ್ಯ ಕೋಟಿಗಟ್ಡಲೇ ಆಸ್ತಿ ಮಾಡಿದ್ದಾರೆ, ಒಂದು ಕಾಂಗ್ರೆಸ್ ಕಚೇರಿ ಕೂಡ ಮಾಡಿಲ್ಲ. ಒಂದು ತಂತ್ರ ಪ್ರಚಾರದಲ್ಲಿ ಉಳಿಯೋದು, ಡಿಕೆಶಿ ಮುಗಿಸೋದು ಇನ್ನೊಂದು ಕುತಂತ್ರ. ಜೆಡಿಎಸ್ ನಲ್ಲಿ ಇದ್ದಾಗಲೂ ದೇವೇಗೌಡರನ್ನ ತುಳಿದವರು. ಸೋನಿಯಾ ಗಾಂಧಿ ಬಗ್ಗೆಯೇ ಕೆಟ್ಟ ಶಬ್ದದಲ್ಲಿ ಮಾತನಾಡಿದವರು ಮತ್ತೆ ಅದೇ ಸೋನಿಯಾ ಕಾಲಿಗೆ ಬಿದ್ದಿದ್ದಾರೆ ಎಂದರು.
PublicNext
13/10/2021 03:48 pm