ಕಲಬುರಗಿ; ಜಿಲ್ಲೆಯ ಕಾಳಗಿ ತಾಲೂಕಿನ ಗಡಿಕೇಶ್ವರ ಗ್ರಾಮ ಸೇರಿ 50 ಕ್ಕೂ ಅಧಿಕ ಗ್ರಾಮಗಳಲ್ಲಿ ಭೂಕಂಪನ ಆಗಿದ್ದು ರಿಕ್ಟರ್ ಮಾಪಕದಲ್ಲಿ 4.1 ರಷ್ಟು ತೀವ್ರತೆ ದಾಖಲಾಗಿದೆ. ಇದು ದೊಡ್ಡ ಪ್ರಮಾಣದ ಕಂಪನ ಆಗಿರುವುದರಿಂದ
ಮನೆಗಳು ಬಿದ್ದಿವೆ, ಜನ ಭಯಭೀತರಾಗಿ ಊರು ತೊರೆಯುತ್ತಿದ್ದಾರೆ.
ಇಂದು ಗ್ರಾಮಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ವಸ್ತುಸ್ಥಿತಿಯ ಪರಿಶೀಲನೆ ನಡೆಸಿದರು ನಂತರ ಮಾತನಾಡಿದ ಇವರು,"ಈಗಷ್ಟೇ ನಾನು ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭಯಾನಕ ಶಬ್ಧ ಕೇಳ್ಪಟ್ಟೆ, ಸರ್ಕಾರ ಜನರಿಗೆ ಪುನರ್ವಸತಿ ಕಾರ್ಯಕ್ರಮಗಳನ್ನ ಚಾಲನೆ ಮಾಡಬೇಕಿತ್ತು,ಇದುವರೆಗೆ ಗ್ರಾಮಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರದ ಪ್ರತಿನಿಧಿಗಳು ಭೇಟಿ ನೀಡಿಲ್ಲ ಆದರೆ ನಾನು ತಹಶೀಲ್ದಾರ್ ಕಳುಹಿಸ್ತೀನಿ, ಎ.ಸಿ ಕಳುಹಿಸ್ತೀನಿ ಎಂದು ಜಿಲ್ಲಾಧಿಕಾರಿ ಉಡಾಫೆ ಉತ್ತರ ಕೊಡ್ತಾರೆ ವಿನಃ ಯಾವುದು ಇಲ್ಲಿಯ ತನಕ ಕಾರ್ಯಗತ ಆಗಿಲ್ಲ.
ನಾನು ಇಂದು ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡ್ತಿನಿ ಅಂತಾ ಡಿ.ಸಿ ಭೇಟಿ ನೀಡಿದ್ದಾರೆ "ಎಂದು ಡಿ.ಸಿ ವಿ ವಿ ಜ್ಯೋತ್ಸ್ನಾ ವಿರುದ್ಧ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಡಿಸಿ ಅಂದ್ರೆ ಏನು? ಜಿಲ್ಲೆಗೆ ದಂಡಾಧಿಕಾರಿ! ನಿಂತಲ್ಲೆ ಆದೇಶ ಮಾಡಿ ಪುನರ್ವಸತಿ ಕಾರ್ಯಕ್ಕೆ ಚಾಲನೆ ನೀಡಬೇಕಿತ್ತು ಆದರೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವ ಜಿಲ್ಲಾಡಳಿತದ ನಡೆ ಖಂಡನೀಯವಾದದ್ದು ಎಂದು ಸಿದ್ದು ಕಿಡಿಕಾರಿದರು.
PublicNext
12/10/2021 09:39 pm