ಪಶ್ಚಿಮ ಬಂಗಾಳ: ಮಮತಾ ಬ್ಯಾನರ್ಜಿ ಯಾವುದೇ ವಿಷಯ ಇದ್ದರೂ ಸಹ ಅದರ ವಿರುದ್ಧ ಧ್ವನಿ ಎತ್ತುತ್ತಾರೆ. ಆದರೆ ಶಾರುಕ್ ಪುತ್ರ ಆರ್ಯನ್ ಖಾನ್ ಬಂಧನಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಮೌನತಾಳಿದ್ದಾರೆ. ಯಾಕೆ ? ಈ ಪ್ರಶ್ನೆಯನ್ನ ಈಗ ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಕೇಳುತ್ತಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಅವ್ರು,ಶಾರುಕ್ ಖಾನ್ ರನ್ನ ಸಹೋದರ ಅಂತಲೇ ಕರೆಯುತ್ತಾರೆ. ಶಾರುಕ್ ಕೂಡ
ಅದನ್ನ ಸ್ವೀಕರಿಸಿದ್ದಾರೆ. ಪಶ್ಚಿಮ ಬಂಗಾಳದ ರಾಯಭಾರಿ ಕೂಡ ಆಗಿದ್ದಾರೆ. ಇಷ್ಟೆಲ್ಲ ಗಟ್ಟಿ ಬಾಂಧವ್ಯ ಇದ್ದರೂ ಕೂಡ ಶಾರುಕ್ ಪುತ್ರ ಆರ್ಯನ್ ಬಂಧನದ ಬಗ್ಗೆ ಒಂದು ಮಾತೂ ಆಡಿಲ್ಲ ಯಾಕೆ ? ಹೀಗೆ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಕ್ವಶ್ಚನ್ ಮಾಡುತ್ತಿದ್ದಾರೆ. ಮಮತಾ ಮೋಸ್ಟ್ಲಿ ಬಿಜೆಪಿ ನಾಯಕರನ್ನ ಓಲೈಸೋಕೆ ಈ ಥರ ಮಾಡ್ತಿರಬಹುದು ಅಂತಲೂ ಟೀಕಿಸಿದ್ದಾರೆ ಅಧೀರ್ ರಂಜನ್. ಏನೇ ಆದರೂ ಮಮತಾ ದೀದಿ ಮೌನ ಮುರಿದಿಲ್ಲ.
PublicNext
12/10/2021 06:29 pm