ವಿಜಯಪುರ: ಭ್ರಷ್ಟಾಚಾರ ನಡೆದಿದೆ ಎಂದು ಅವತ್ತು ಮಾತನಾಡಿದ್ದಕ್ಕೆ ಇಂದು ಆದಾಯ ತೆರಿಗೆ (ಐಟಿ) ಅಧಿಕಾರಿಗಳಿಂದ ದಾಳಿ ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ನಾನು ಲೂಟಿ ಮಾಡಿದರೂ ಭ್ರಷ್ಟಾಚಾರಿಯೇ. ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ಕೆಕೆಪಿಸಿ ಡಿ.ಕೆ.ಶಿವಕುಮಾರ್, ಜೆಸಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದು ಯಾರೇ ಲೂಟಿ ಮಾಡಿದರೂ ಅದು ಭ್ರಷ್ಟಾಚಾರವೇ. ನಾನು ಲೂಟಿ ಮಾಡಿಲ್ಲ. ನಮ್ಮ ಮನೆಯಲ್ಲಿ ಏನಿಲ್ಲ, ಅದಕ್ಕೆ ಐಟಿ ರೈಡ್ ಆಗಿಲ್ಲ.ಕಳ್ಳರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ" ಹೇಳಿದ್ದಾರೆ.
PublicNext
12/10/2021 04:47 pm