ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಸಕ ರೇಣುಕಾಚಾರ್ಯ ಗಿಫ್ಟ್ ವಿದ್ಯಾರ್ಥಿನಿಯರು ಖುಷ್

ಬೆಂಗಳೂರು: ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದಂತೆ ಮಾಡಿದ್ದಾರೆ. ಮಾಡಿದ್ದನ್ನೇ ಈಗ ಎಲ್ಲರಿಗೂ ಟ್ವಿಟ್ ಮೂಲಕ ತೋರಿದ್ದಾರೆ. ಹೌದು, ಸುಂಕದಕಟ್ಟೆ ಹಾಗೂ ಟಿ.ಗೋಪಗೊಂಡನಹಳ್ಳಿ ವಿದ್ಯಾರ್ಥಿನಿಯರು ತಮಗೆ

ಸ್ಮಾರ್ಟ್ ಫೋನ್ ಅವಶ್ಯಕತೆ ಇದೆ ಅಂತಲೇ ಹೇಳಿದ್ದರು. ಅವರ ಆ ಬೇಡಿಕೆಯನ್ನ ಈಡೇರಿಸಿದ್ದಾರೆ ಶಾಸಕ ಎಂಪಿ ರೇಣುಕಾಚಾರ್ಯ.

ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಫೋನ್ ಅಗತ್ಯ ಅತಿ ಹೆಚ್ಚಿದೆ. ಆದರೆ ಟಿ.ಗೋಪಗೊಂಡನಹಳ್ಳಿ ವಿದ್ಯಾರ್ಥಿನಿ ಬಿಂದು ಮತ್ತು ಸುಂಕದಕಟ್ಟೆ ವಿದ್ಯಾರ್ಥಿನಿ ನರ್ಮದ ಗೆ ಸ್ಮಾರ್ಟ್ ಫೋನ್ ಅವಶ್ಯಕತೆ ತುಂಬಾನೆ ಇತ್ತು. ತಮ್ಮ ಅವಶ್ಯಕತೆಯನ್ನ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯರ ಗಮನಕ್ಕೂ ತಂದಿದ್ದರು. ಅದನ್ನ ಕೊಡಿಸೋದಾಗಿಯೂ ಶಾಸಕರು ಹೇಳಿದ್ದರು. ಹೇಳಿದಂತೆ, ಈಗ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ದಾರೆ. ಅದಕ್ಕೇನೆ ಈಗ ಈ ಹುಡುಗಿಯರ ಕೈಯಲ್ಲಿ ಸ್ಮಾರ್ಟ್ ಫೋನ್ ಕಾಣಿಸುತ್ತಿವೆ. ಸ್ಮಾರ್ಟ್ ಫೋನ್ ಪಡೆದ ಈ ವಿದ್ಯಾರ್ಥಿನಿಯರ ಮೊಗದಲ್ಲಿ ಈಗ

ಮಂದಹಾಸ ಮೂಡಿದೆ.

Edited By :
PublicNext

PublicNext

11/10/2021 05:01 pm

Cinque Terre

81.14 K

Cinque Terre

6

ಸಂಬಂಧಿತ ಸುದ್ದಿ