ಜಮ್ಮು-ಕಾಶ್ಮಿರ್: ಕಿಂಗ್ ಖಾನ್ ಶಾರುಕ್ ಪುತ್ರ ಆರ್ಯನ್ ಬಂಧನ ಈಗ ಎಲ್ಲರಿಗೂ ಚರ್ಚೆಯ ವಿಷಯವೇ ಆಗಿದೆ ಹೋಗಿದೆ. ರಾಜಕೀಯ ವಲಯದಲ್ಲಂತೂ ಪರಸ್ಪರ ಆರೋಪ-ಪ್ರತ್ಯಾರೋಪಗಳು ಆಗುತ್ತಿವೆ. ಆದರೆ ಈಗ ಜಮ್ಮು-ಕಾಶ್ಮಿರ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಬೇರೆ ಥರದ ಟೀಕೆ ಮಾಡಿದ್ದಾರೆ. 'ಖಾನ್' ಆಗಿರೋದ್ರಿಂದಲೇ ಶಾರುಕ್ ಖಾನ್ ಫ್ಯಾಮಿಲಿಯನ್ನ ಟಾರ್ಗೆಟ್ ಮಾಡಲಾಗಿದೆ ಅಂತಲೇ ಟೀಕಿಸಿದ್ದಾರೆ ಮೆಹಬೂಬಾ ಮುಫ್ತಿ.
ಶಾರುಕ್ ಪುತ್ರ ಆರ್ಯನ್ ಬಂಧನ ನಿಜಕ್ಕೂ ಮಾತನಾಡಲು ಎಲ್ಲರ ಬಾಯಿಗೂ ಆಹಾರವಾಗಿ ಹೋಗಿದೆ.ಲಖೀಂಪುರ ಹಿಂಸಾತ್ಮಕ ಘಟನೆಗೂ ಆರ್ಯನ್ ಖಾನ್ ಬಂಧನಕ್ಕೂ ಲಿಂಕ್ ಮಾಡಿಯೇ ಈಗ ಮಾತನಾಡಲಾಗುತ್ತಿದೆ. ಲಖೀಂಪುರ ಘಟನೆಯ ಆರೋಪಿಗಳ ಕೇಸ್ ಮುಚ್ಚಿ ಹಾಕಲು ಶಾರುಕ್ ಟಾರ್ಗೆಟ್ ಆಗಿದ್ದಾರೆ ಅಂತಲೇ ಸಿನಿಮಾದವರೆಲ್ಲ ಹೇಳುತ್ತಿದ್ದಾರೆ. ಆದರೆ ಜಮ್ಮು-ಕಾಶ್ಮಿರ ಪಿಡಿಪಿ ಮುಖ್ಯಸ್ಥೆ ಮೆಬಹೂಬಾ ಮುಫ್ತಿ ಬೇರೆ ವಿಚಾರದ ಮೇಲೆನೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದಾರೆ.ಖಾನ್ ಆಗಿರೋದ್ರಿಂದಲೇ ಶಾರುಕ್ ಖಾನ್ ಪುತ್ರನ ಬಂಧನವಾಗಿದೆ. ಆದರೆ, ಲಖೀಂಪುರ ಘಟನೆಯಲ್ಲಿ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಆರೋಪಿಯಾಗಿದ್ದಾನೆ. ಆದರೂ ಆತನ ಬಂಧನ ಆಗಿಯೇ ಇಲ್ಲ ಅಂತಿದ್ದಾರೆ ಮೆಹಬೂಬಾ ಮುಫ್ತಿ.
PublicNext
11/10/2021 04:28 pm