ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಕಮಲ' ಬಿಟ್ಟು ಪುತ್ರನೊಂದಿಗೆ 'ಕೈ' ಹಿಡಿದ ಉತ್ತರಾಖಂಡ ಮಿನಿಸ್ಟರ್

ಡೆಹ್ರಾಡೂನ್: ಉತ್ತರಾಖಂಡ್ ಸಚಿವ ಯಶಪಾಲ್ ಆರ್ಯ ಹಾಗೂ ಅವರ ಪುತ್ರ, ಶಾಸಕ ಸಂಜೀವ್ ಆರ್ಯ ಅವರು ಬಿಜೆಪಿ ತೊರೆದು ಸೋಮವಾರ ಕಾಂಗ್ರೆಸ್‌ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ಉತ್ತರಾಖಂಡ್ ಸಚಿವ ಯಶಪಾಲ್ ಆರ್ಯ ಹಾಗೂ ಸಂಜೀವ್ ಆರ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅವರ ನಿವಾಸದಲ್ಲಿ ಭೇಟಿಯಾದರು. ಬಳಿಕ ಕಾಂಗ್ರೆಸ್‌ ಹಿರಿಯ ನಾಯಕರಾದ ಹರೀಶ್ ರಾವತ್ ಮತ್ತು ಕೆಸಿ ವೇಣುಗೋಪಾಲ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.

ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ, "ಯಶಪಾಲ್ ಆರ್ಯ ಅವರು ಉತ್ತರಾಖಂಡ್ ಕ್ಯಾಬಿನೆಟ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

11/10/2021 03:43 pm

Cinque Terre

21.34 K

Cinque Terre

3