ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಸ್ತು ಹೊಡೆಸುತ್ತಿದೆ ಜಿಲ್ಲಾ ಉಸ್ತುವಾರಿ ಹಂಚಿಕೆ ಸಂಕಟ

ಬೆಂಗಳೂರು : ಶೀಘ್ರದಲ್ಲಿಯೇ ಅಧಿಕೃತವಾಗಿ ಜಿಲ್ಲಾ ಉಸ್ತುವಾರಿಗಳ ಹಂಚಿಕೆಗೆ ಪ್ಲಾನ್ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ.

ಬೆಂಗಳೂರು ನಗರದ ಜಿಲ್ಲಾ ಉಸ್ತುವಾರಿ ಆಗಲು ಸಚಿವ ವಿ. ಸೋಮಣ್ಣ ಹಾಗೂ ಆರ್. ಅಶೋಕ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಆರ್. ಅಶೋಕ್‌ಗೆ ಜಿಲ್ಲಾ ಉಸ್ತುವಾರಿ ಆಗುವ ಅವಕಾಶ ತಪ್ಪಿಸಲು ಹಲವಾರು ತಂತ್ರಗಳು ನಡೆಯುತ್ತಿದ್ದು, ಸೋಮಣ್ಣಗೆ ಕೆಲ ಬಿಜೆಪಿ ಶಾಸಕರಿಂದಲೇ ಬೆಂಬಲ ದೊರೆಯುತ್ತಿದೆ. ಇದರಿಂದಾಗಿ ಸರ್ಕಾರದಲ್ಲಿ ಆಂತರಿಕ ಭಿನ್ನಮತ ಮತ್ತೆ ಭುಗಿಲೆದ್ದಂತೆ ಕಾಣುತ್ತಿದೆ. ಹೀಗಾಗಿ ಇಬ್ಬರ ನಡುವೆ ಇರುವ ಮನಸ್ತಾಪವನ್ನು ಬಗೆಹರಿಸಲು ಬಸವರಾಜ್ ಬೊಮ್ಮಾಯಿಯವರು ಇಂದು ಚರ್ಚೆ ನಡೆಸಲಿದ್ದು ಬೆಂಗಳೂರು ಅಷ್ಟೇ ಅಲ್ಲದೇ ಉಳಿದ ಜಿಲ್ಲೆಗಳಲ್ಲಿ ಇಂಥ ಸಂಘರ್ಷ ಆಗದಂತೆ ಗಮನ ವಹಿಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

10/10/2021 02:25 pm

Cinque Terre

49.11 K

Cinque Terre

0

ಸಂಬಂಧಿತ ಸುದ್ದಿ