ಶಿವಮೊಗ್ಗ:ಮಾಜಿ ಸಿಎಂ ಯಡಿಯೂರಪ್ಪನವ್ರೂ ಕ್ರಿಕೆಟ್ ವೀಕ್ಷಿಸುತ್ತಾರೆ. ರಾಜಕೀಯದ ಎಂತಹದ್ದೇ ಕೆಲಸ ಇದ್ದರೂ ಸರಿಯೇ ಕ್ರಿಕೆಟ್ ಮಿಸ್ ಮಾಡಿಕೊಳ್ಳುವುದೇ ಇಲ್ಲ. ಇದನ್ನ ನಾವ್ ಹೇಳ್ತಿಲ್ಲ. ಇದು ಸತ್ಯವಾದ ವಿಷಯ.ನಿನ್ನೆ ನಡೆದ RCB ಮತ್ತು ಡೆಲ್ಲಿ ಪಂದ್ಯವನ್ನ ಬಿ.ಎಸ್.ವೈ ವೀಕ್ಷಿಸಿದ್ದಾರೆ.
ಯಡಿಯೂರಪ್ಪನವ್ರಿಗೂ ಕ್ರಿಕೆಟ್ ಆಸ್ತಕಿ ಇದೆ ಅನ್ನೋದೇ ವಿಶೇಷ. ರಾಜಕೀಯ ಜಂಜಾಟದ ನಡುವೇನೂ ಕ್ರಿಕೆಟ್ ನೋಡ್ತಾರೆ ಅಂದ್ರೆ ಅದು ವಿಶೇಷ ಅಲ್ವಾ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಕಾರ್ ಅಲ್ಲಿ ಕುಳಿತು ಡೆಲ್ಲಿ ಮತ್ತು ಆರ್‌ಸಿಬಿ ಪಂದ್ಯ ವೀಕ್ಷಿಸಿರೋದು.ಶಿವಮೊಗ್ಗ ದಿಂದ ಶಿಕಾರಿಪುರಕ್ಕೆ ತೆರಳುವ ಸಮಯದಲ್ಲಿಯೇ ಕಾರ್ ಪಕ್ಕಕ್ಕೆ ನಿಲ್ಲಿಸಿ ಇಡೀ ಪಂದ್ಯವನ್ನ ಯಡಿಯೂರಪ್ಪ ವೀಕ್ಷಿಸಿ ಖುಷಿಪಟ್ಟಿದ್ದಾರೆ.
PublicNext
09/10/2021 03:29 pm