ಉಡುಪಿ: ಕಾಶ್ಮೀರದಲ್ಲಿ ನಡೆದ ಭಯೋತ್ಪಾದನೆ ಚಟುವಟಿಕೆಗಳನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಎಲ್ಲ ರೀತಿಯ ಭಯೋತ್ಪಾದನೆಗಳನ್ನು ನಿಯಂತ್ರಿಸಲು ಕೇಂದ್ರ ಸರಕಾರ ಶಕ್ತವಾಗಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ಅಫಘಾನಿಸ್ಥಾನದ ಬೆಳವಣಿಗೆ ಬಳಿಕ ಈ ರೀತಿಯ ಕೃತ್ಯ ನಡೆಯಬಹುದು ಎಂಬ ಊಹೆ ನಮಗಿತ್ತು. ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಇದನ್ನು ಸಹಿಸಲು ಆಗದ ಭಯೋತ್ಪಾದಕ ಶಕ್ತಿಗಳು ಈ ಕೃತ್ಯ ಎಸಗಿವೆ. ಮೋದಿ ನೇತೃತ್ವದ ಸರಕಾರ ಇದನ್ನು ನಿಯಂತ್ರಿಸಲು ಸಶಕ್ತವಾಗಿದೆ ಎಂದರು.
PublicNext
08/10/2021 05:11 pm