ಹಾವೇರಿ : ಹಾನಗಲ್ ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಬೈ ಎಲೆಕ್ಷನ್ ನಡೆಯುತ್ತಿದೆ. ಇನ್ನು ಸಿ.ಎಂ.ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡುವುದಾಗಿ ಭರವಸೆಯಲ್ಲಿದ್ದ ಕುಟುಂಬಕ್ಕೆ ನಿರಾಸೆಯಾಗಿದೆ. ಅಚ್ಚರಿಯ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದೆ. ಹೌದು ಹಾನಗಲ್ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಜ್ ಸಜ್ಜನರ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ.
ಇನ್ನು ಬಿಎಸ್ ವೈ, ಉದಾಸಿ ಕುಟುಂಬಕ್ಕೆ ಆಪ್ತರಾಗಿರುವ ಶಿವರಾಜ್ ಸಜ್ಜನ್ ಒಂದು ಬಾರಿ ಎಂ.ಎಲ್.ಎ ಯಾಗಿದ್ದರು. ಜೊತೆಗೆ ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿಯೂ ಸಜ್ಜನರ್ ಸೇವೆ ಸಲ್ಲಿಸಿದ್ದಾರೆ.
PublicNext
07/10/2021 09:55 am