ಅಸ್ಸಾಂ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸದ್ಯ ಟೆಂಪಲ್ ರನ್ ಅಲ್ಲಿದ್ದಾರೆ. ಅಸ್ಸಾಂ ನ ನೀಲಾಚಲ ಬೆಟ್ಟದ ಮೇಲಿರೋ ಕಾಮಾಕ್ಯ ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದೇಶದ ರೈತರ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ನಮ್ಮ ದೇಶದ ಅನ್ನದಾತರಿಗೆ ಒಳಿತಾಗಬೇಕು. ಕಾಮಾಕ್ಯ ದೇವಿ ಆಶೀರ್ವಾದ ಎಲ್ಲರ ಮೇಲೂ ಇರಲಿ ಅಂತ ಬೇಡಿಕೊಂಡಿದ್ದಾರೆ. ಕಾಮಾಕ್ಯ ದೇವಿ ದರ್ಶನದ ಫೋಟೋವನ್ನ ತಮ್ಮ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.
PublicNext
05/10/2021 12:00 pm