ನವದೆಹಲಿ: ದೆಹಲಿ ಕರ್ನಾಟಕ ಸಂಘದಅಧ್ಯಕ್ಷರಾಗಿ ಸಿ.ಎಂ. ನಾಗರಾಜ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಡಾ.ಎಂ.ಎಸ್. ಶಶಿಕುಮಾರ್, ಪೂಜಾ ರಾವ್ ಚುನಾಯಿತರಾಗಿದ್ದಾರೆ.
ಸಂಘದ 2021–22ನೇ ಸಾಲಿನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆಗಾಗಿ ಭಾನುವಾರ ಚುನಾವಣೆ ನಡೆಯಿತು. ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಆರ್.ರೇಣುಕುಮಾರ್, ಜಂಟಿ ಕಾರ್ಯದರ್ಶಿಗಳಾಗಿ ಬಿ.ನಾರಾಯಣ, ಸುಮಿತಾ ಮುರಗೋಡ, ಖಜಾಂಚಿಯಾಗಿ ರಾಧಾಕೃಷ್ಣ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಭಾಕರ ಮಡ್ಡಿತೊಟ, ಎಂ.ಶಿವಪ್ಪ, ಎ.ಟಿ. ಶ್ರೀನಿವಾಸ, ಕೆ.ಎಸ್. ಮೂರ್ತಿ, ಮಾಲಿನಿ ಪ್ರಹ್ಲಾದ್, ವಿ.ನವೀನ ಕುಮಾರ್, ಸವಿತಾ ನೆಲ್ಲಿ, ಬಿ.ಎಸ್. ಅಶ್ವಿನಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
PublicNext
04/10/2021 09:13 pm