ಕೋಲಾರದಲ್ಲಿ ಸರ್ಕಾರಿ ನೌಕರರನ್ನು ಅವಾಚ್ಯವಾಗಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ನಿಂದಿಸಿರುವ ಘಟನೆ ನಡೆದಿದೆ.ಶ್ರೀನಿವಾಸಪುರ ಪಟ್ಟಣದಲ್ಲಿ ತಹಶೀಲ್ದಾರ್ ಶ್ರೀನಿವಾಸ್ ಸಮ್ಮುಖದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಘಟನೆ ನಡೆದಿದೆ.
ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಸಲುವಾಗಿ ಚರ್ಚಿಸಲು ನಡೆದ ಸಹಕಾರ ಸಂಘಗಳ ಕಾರ್ಯದರ್ಶಿಗಳ ಸಭೆ ಇದಾಗಿತ್ತು, ಮಾಜಿ ಸ್ಪೀಕರ್ ಸಭೆಯಲ್ಲಿ ಜಾತಿ ನಿಂದನೆ ಕೂಡ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರ ಎದುರೇ ಈ ಎಲ್ಲಾ ಪ್ರಹಸನ ನಡೆದಿದೆ.
ರೈತರಿಗೆ ಡಿಸಿಸಿ ಬ್ಯಾಂಕ್ ವಿತರಿಸುವ ಸಾಲಕ್ಕೆ ದಾಖಲೆ ಕೊಡಲು ಕಂದಾಯ ಇಲಾಖೆ ವಿಳಂಬ ಮಾಡಿದ್ದ ಹಿನ್ನಲೆಯಲ್ಲಿ
ಕಂದಾಯ ಇಲಾಖೆ ನೌಕರರ ನಡವಳಿಕೆಯಿಂದ ರೈತರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರು.ಇದರಿಂದ ಬೇಸತ್ತ ಶಾಸಕ ರಮೇಶ್
ನೌಕರರರ ಮೇಲೆ ರೇಗಿದ್ದಾರೆ. ಮನುಷ್ಯತ್ವ ಕಳೆದುಕೊಂಡಿದ್ದೀರಿ, ಕೆಲಸ ಮಾಡದ ನೌಕಕರನ್ನು ಬಾರಿಸಲು ಶುರು ಮಾಡ್ತೀನಿ.
ನೌಕರರ ಸಂಘ ಬಂದು ಪ್ರತಿಭಟನೆ ಮಾಡಲೀ ನೋಡ್ತೀನಿ.
ರಾಜ್ಯದಲ್ಲಿ ಸಂಘರ್ಷವೇ ನಡೆದುಹೋಗಲಿ, ಜನರು ಒಳ್ಳೆಯದನ್ನು ತೀರ್ಮಾನಿಸ್ತಾರೆ. ಸಂಬಳ ಬೇಕು, ಬಂದೋಬಸ್ತ್ ಬೇಕು, ಅನುಕೂಲ ಬೇಕು ಆದರೆ, ರೈತರ ಕಷ್ಟ ಬೇಕಾಗಿಲ್ಲ ಸೂ...ಮಕ್ಕಳಿಗೆ ಎಂದು ಸಾಹೇಬ್ರು ಫುಲ್ ಗರಂ ಆಗಿದ್ದರು.
ಇನ್ನೂ ಸಬ್ ರಿಜಿಸ್ಟ್ರಾರ್ ಕಚೇರಿ ಕಾರ್ಯವೈಖರಿ ಬಗ್ಗೆಯು ತರಾಟೆಗೆ ತೆಗೆದುಕೊಂಡ ಶಾಸಕರು ಎಲ್ಲ ಕಚೇರಿಯಲ್ಲಿ ರೈತನನ್ನು ಸತಾಯಿಸಿದ ನಂತರ ಕೆಲವೇ ಸಾವಿರ ಉಳಿಯುವುದು ಎಂದಿದ್ದಾರೆ
ವಾಣಿಜ್ಯ ಬ್ಯಾಂಕುಗಳು ರೈತರ ರಕ್ತ ಕುಡಿದುಬಿಡ್ತಾರೆ ಸೂ..ಮಕ್ಕಳು ಎಂದು ಕಾಂಗ್ರೆಸ್ ಹಿರಿಯ ಶಾಸಕ ಲೇವಡಿ ಮಾಡಿದ್ದಾರೆ. ಇವರು ಇತ್ತೀಚೆಗಷ್ಟೇ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರ ವಿರುದ್ಧ ರಸ್ತೆಯಲ್ಲಿ ನಿಂದಿಸಿ ಸುದ್ದಿಯಾಗಿದ್ದರು. ಇವರ ಈ ನಡವಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಇದೀಗ ಸರ್ಕಾರಿ ನೌಕರರನ್ನು ಅಶ್ಲೀಲವಾಗಿ ಬೈದಿರುವುದು ಮತ್ತೆ ಸುದ್ದಿಯಾಗಿದೆ
PublicNext
02/10/2021 01:38 pm