ದಾವಣಗೆರೆ: ಸೋಲುವ ಭೀತಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಹಿಂದಾ ಹೋರಾಟ ಆರಂಭಿಸಿದ್ದಾರೆ ಎಂದು ನಗರಾಭಿವೃದ್ಧಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 5 ವರ್ಷ ಇದ್ರೂ ಆವಾಗ ಯಾಕೆ ಅಹಿಂದಾಕ್ಕೆ ಗಮನ ಕೊಟ್ಟಿಲ್ಲ. ಅಹಿಂದ ವರ್ಗಕ್ಕೆ ಏನು ಕೊಟ್ಟಿಲ್ಲ. ನಾವು ಅಹಿಂದಾದಲ್ಲೇ ಇದ್ದೇವೆ ನಾವು ಅಹಿಂದಾ ಮಾಡ್ತೀವಿ ಎಂದು ತಿರುಗೇಟು ನೀಡಿದರು.
ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಸಚಿವ ಬೈರತಿ ಬಸವರಾಜ್, ಸಿದ್ದರಾಮಯ್ಯ ಅಹಿಂದಾನಾದ್ರೂ ಸ್ಟಾರ್ಟ್ ಮಾಡ್ಲಿ ಏನಾದ್ರೂ ಮಾಡ್ಲಿ. ಜನರು ಮಾತ್ರ ಬಿಜೆಪಿ ಪಕ್ಷದ ಪರವಾಗಿದ್ದಾರೆ ಎಂದು ತಿಳಿಸಿದರು.
ಮುಂದಿನ ಚುನಾವಣೆಯ ಎದುರಿಸಿ ಮತ್ತೆ ನಾವು ಅಧಿಕಾರ ಹಿಡಿಯುತ್ತೇವೆ. ಮುಂಬೈ ಮಿತ್ರ ಮಂಡಳಿ ಸದಸ್ಯರು ಮತ್ತೆ ಕಾಂಗ್ರೆಸ್ ಗೆ ಸೇರ್ತಾರ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಮತ್ತೆ ಕಾಂಗ್ರೆಸ್ ಸೇರುವುದು ಈ ಜನುಮದಲ್ಲಿ ಸಾಧ್ಯವಿಲ್ಲ. ನಾವು ಬಿಜೆಪಿ ತತ್ವ, ಸಿದ್ದಾಂತವನ್ನ ಒಪ್ಪಿ ಅಪ್ಪಿಕೊಂಡು ಬಂದಿದ್ದೇವೆ. ಮತ್ತೆ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದು ಮತ್ತೆ ನೀವು ಕಾಂಗ್ರೆಸ್ ಸೇರುತ್ತೀರಾ ಎಂಬ ಪ್ರಶ್ನೆಗೆ ಖಾರವಾಗಿ ಸಚಿವ ಬೈರತಿ ಬಸವರಾಜ್ ಉತ್ತರಿಸಿದರು.
PublicNext
02/10/2021 01:03 pm