ನವದೆಹಲಿ: ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ಮುಖಂಡ ಕನ್ಹಯ್ಯಾ ಕುಮಾರ್ ಇತ್ತಿಚೆಗಷ್ಟೇ ಕಾಂಗ್ರೆಸ್ ಗೆ ಸೇರ್ಪಡೆಯಾದ ಬೆನ್ನಲ್ಲೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ "ನಾನು ಬಿಜೆಪಿಯನ್ನು ‘ತುಕ್ಡೆ-ತುಕ್ಡೆ’ ಮಾಡುತ್ತೇನೆ" ಎಂದು ಹೇಳಿದ್ದಾರೆ.
‘ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬಹುದು ಎಂದು ದೃಢವಾಗಿ ನಂಬಿದ್ದೇನೆ. ಆ ಪಕ್ಷದ ಸೋಲನ್ನು ನಾನು ನೋಡುತ್ತೇನೆ. ಬಿಜೆಪಿ ನನ್ನನ್ನು ‘ತುಕ್ಡೆ-ತುಕ್ಡೆ ಗ್ಯಾಂಗ್’ ಎಂದು ಕರೆಯುತ್ತದೆ. ನಾನು ಬಿಜೆಪಿ ಪಾಲಿಗೆ ‘ತುಕ್ಡೆ-ತುಕ್ಡೆ’, ಹಾಗೂ ನಾನು ಬಿಜೆಪಿಯನ್ನು ‘ತುಕ್ಡೆ-ತುಕ್ಡೆ’ ಮಾಡುತ್ತೇನೆ. ಬಿಜೆಪಿ ಪಕ್ಷವು ಗೋಡ್ಸೆಯನ್ನು ರಾಷ್ಟ್ರಪಿತ ಎಂದು ಪರಿಗಣಿಸುತ್ತದೆ ಹೊರತು, ಗಾಂಧೀಜಿಯನ್ನಲ್ಲ ಎಂದು ಕಿಡಿ ಕಾರಿದ್ದಾರೆ.
ಮಹಾತ್ಮ ಗಾಂಧಿಯವರ ಹಂತಕ ನಾಥೂರಾಮ್ ಗೋಡ್ಸೆಯನ್ನು ಉಲ್ಲೇಖಿಸಿದ ಕನ್ಹಯ್ಯಕುಮಾರ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ‘ನಾಥೂರಾಮ್-ಬನಾಯಿ ಜೋಡಿ’ ಎಂದು ಕರೆದಿದ್ದಾರೆ.
PublicNext
02/10/2021 07:31 am