ಚಿತ್ರದುರ್ಗ : ಭಾರತ್ ಬಂದ್ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಗಾಂಧಿ ವೃತ್ತದಲ್ಲಿ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವಾಗ ಕುಡುಕನೊಬ್ಬ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರಿಂದ ಭಿಕ್ಷೆ ಬೇಡಿ ದುಡ್ಡು ಪಡೆದಿದ್ದಾನೆ. ಮಹಿಳೆಯರು ವಯಸ್ಸಾದ ಮುದುಕ ಊಟಕ್ಕೆ ದುಡ್ಡಿಲ್ಲ ಎಂದು ಕೊಟ್ಟರೆ, ಕುಡುಕ ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಪ್ರತಿಭಟನೆ ಸ್ಥಳದಿಂದ ಕೂದಲೆಳೆ ಅಂತರದಲ್ಲಿದ್ದ ಬಾರ್ ಅಂಗಡಿಗೆ ಹೋಗಿ ಎಣ್ಣೆ ಕುಡಿದು ಬಂದ ಘಟನೆ ನಡೆಯಿತು.
PublicNext
27/09/2021 03:31 pm