ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಾಬ್ ನ ಚರಣಜಿತ್ ಸಿಂಗ್ ಚನ್ನಿ ಸಚಿವ ಸಂಪುಟ ವಿಸ್ತರಣೆ : 15 ಶಾಸಕರ ಪ್ರಮಾಣ ವಚನ

ಚಂಡೀಗಡ: ಪಂಜಾಬ್ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ದಲಿತ ಸಮುದಾಯದ ಚರಣಜಿತ್ ಸಿಂಗ್ ಚನ್ನಿ ಅವರನ್ನು ಕೂರಿಸಲಾಗಿದೆ.

ಸದ್ಯ ನೂತನ ಸಿಎಂ ಚನ್ನಿ ಅವರು ಭಾನುವಾರ ಸಂಪುಟ ವಿಸ್ತರಣೆ ಮಾಡಿದ್ದು, 15 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಸಂಪುಟಕ್ಕೆ 8 ಮಂದಿ ಅನುಭವಿಗಳನ್ನು ಸೇರಿಸಿಕೊಳ್ಳಲಾಗಿದ್ದು, 7 ಮಂದಿ ಹೊಸ ಶಾಸಕರಿಗೆ ಮಣೆ ಹಾಕಲಾಗಿದೆ.

ಬ್ರಹ್ಮ ಮೊಹಿಂದ್ರಾ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮನ್ ಪ್ರೀತ್ ಸಿಂಗ್ ಬಾದಲ್, ತೃಪ್ತ್ ರಾಜಿಂದರ್ ಸಿಂಗ್ ಬಾಜ್ವಾ, ಅರುಣಾ ಚೌಧರಿ, ಅರುಣಾ ಚೌಧರಿ, ಸುಖ್ಬಿಂದರ್ ಸಿಂಗ್ ಸರ್ಕಾರಿಯಾ ಮತ್ತು ರಾಣಾ ಗುರ್ಜಿತ್ ಸಿಂಗ್ ಕ್ರಮವಾಗಿ ಪ್ರಮಾಣವಚನ ಸ್ವೀಕರಿಸಿದರು.

ರಜಿಯಾ ಸುಲ್ತಾನ, ವಿಜಯ್ ಇಂದರ್ ಸಿಂಗ್ಲಾ ಮತ್ತು ಭರತ್ ಭೂಷಣ್ ಅಶು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಸೇರಿದಂತೆ ಒಟ್ಟು 18 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

Edited By : Nirmala Aralikatti
PublicNext

PublicNext

26/09/2021 10:39 pm

Cinque Terre

115.16 K

Cinque Terre

0

ಸಂಬಂಧಿತ ಸುದ್ದಿ