ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೇ ಎಪಿಎಂಸಿ ರದ್ದು ಮಾಡೋ ಯೋಜನೆಯಿತ್ತು! ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ- ಕೃಷಿ ಮಸೂದೆಗಳನ್ನು ವಿರೋಧಿಸಿ ನಾಳೆ ಬಂದ್ ಕರೆ ನೀಡಿರುವವರಿಗೆ ದೇವರು ಸದ್ಭುದ್ದಿ ನೀಡಲಿ, ರೈತರಿಗೆ ಕೃಷಿ ಮಸೂದೆಗಳು ಅನುಕೂಲಕರವಾಗಲಿವೆ ಎಂದು ಸ್ವಾಮೀನಾಥಾನ್ ತಮ್ಮ ವರದಿಯಲ್ಲಿಯೇ ತಿಳಿಸಿದ್ದಾರೆ. ರೈತರ ಹಿತ ಕಾಯುವವರು ಯಾರೂ ಈ ರೀತಿ ನಡೆದುಕೊಳ್ಳಲ್ಲ. ರೈತರಿಗೆ ಒಳ್ಳೆಯದು ಆಗುತ್ತಿರುವಾಗ ಅದನ್ನು ತಡೆಯುವ ಕೆಲಸ ಮಾಡಬೇಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಹಳಷ್ಟು ಭಾರಿ ಭಾರತ ಬಂದ ಕರೆ ನೀಡಿದ್ದಾರೆ. ಕೃಷಿ ಕಾಯ್ದೆ ರೈತರ ವಿರೋಧಿಯಾಗಿಲ್ಲ. ಕೃಷಿ ಕಾಯ್ದೆಗಳಿಗೆ ಪಂಜಾಬ್ ಹೊರತು ಪಡಿಸಿ ಬೇರೆ ಎಲ್ಲೂ ವಿರೋಧ ವ್ಯಕ್ತವಾಗಿಲ್ಲ. ಇನ್ನೂ ಭಾರತ ಬಂದ ಕರೆ ನೀಡಿದವರಿಗೆ ದೇವರು ಸದ್ಬುದ್ದಿ ನೀಡಲಿ. ಭಾರತ ಬಂದ ಕರೆಯಲ್ಲಿ ರೈತ ಮುಖಂಡರು ಯಾರೂ ಇಲ್ಲ. ಕೃಷಿ ಕಾಯ್ದೆ ವಿಚಾರದಲ್ಲಿ ಸ್ವಾಮಿನಾಥನ್ ರವರೆ ವರದಿ ನೀಡಿದ್ದಾರೆ ಎಂದು ತಿಳಿಸಿದರು.

ಬೆಲೆ ಏರಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಬೆಲೆ ಏರಿಕೆ ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರತಿ ವರ್ಷ ಏರಿಕೆ ಆಗಿದೆ, ಕಾಂಗ್ರೆಸ್ ಆಡಳಿತ ನಡೆಸುವಾಗ ಲೂಟಿ ಮಾಡುತ್ತಲೇ ಅಧಿಕಾರ ನಡೆಸಿದೆ. ಮೋದಿ‌ ಸರ್ಕಾರದಲ್ಲಿ ಕಳೆದ 7 ವರ್ಷದಲ್ಲಿ ಬೆಲೆ ಎರಿಕೆ ಆಗಿಲ್ಲ. ಆದರೆ ಕೊರೋನ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲೇ ಬೆಲೆ ಏರಿಕೆ ಆಗಿದೆ. ಹಾಗಾಗಿ ಭಾರತದಲ್ಲೂ ಬೆಲೆ ಏರಿಕೆ ಸಾಮಾನ್ಯವಾಗಿ ಏರಿಕೆಯಾಗಿದೆ. ಪ್ರೆಟ್ರೋಲ್ ಡಿಸೇಲ್ ಹೊರತುಪಡಿಸಿ ಉಳಿದ ತೈಲ ಬೆಲೆ ಇಳಿಕೆಯಾಗುತ್ತ ಸಾಗಿದೆ. ಅದರಂತೆ ಬೆಲೆ ಎರಿಕೆ‌ ಸಹ ಕಡಿಮೆ ಆಗುತ್ತೆ, ಆ ನಂಬಿಕೆ ಇಟ್ಟುಕೊಂಡು ನಾವೂ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇನ್ನೂ ಚೆನ್ನಮ್ಮ ವೃತ್ತದಲ್ಲಿ ಪ್ಲೈ ಓವರ್ ನಿರ್ಮಾಣದ ಕುರಿತು ಮಾತನಾಡಿದ ಅವರು, ಸಭೆಯಲ್ಲಿ ಸ್ಥಳೀಯರ ಸಲಹೆ ಸೂಚನೆಗಳನ್ನ ಪಡೆದಿದ್ದೇವೆ. ಶಾಸಕ ಅರವಿಂದ ಬೆಲ್ಲದ ಸೇರಿದಂತೆ ತಜ್ಞರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು. ಪ್ಲೈ ಓವರ್ ನಿರ್ಮಾಣದ ಕುರಿತು ಜನೇವರಿಯಿಂದ ಸಾಕಷ್ಟು ಸಲಹೆಗಳು ಬಂದಿವೆ. ಸ್ಥಳೀಯರ ಸಲಹೆ. ದೂರುಗಳಿದ್ರೆ ಅವುಗಳನ್ನ ಪರಿಗಣಿಸಲಾಗುವುದು ಎಂದು ತಿಳಿಸಿದರು.

Edited By : Nagesh Gaonkar
PublicNext

PublicNext

25/09/2021 05:55 pm

Cinque Terre

67.75 K

Cinque Terre

1

ಸಂಬಂಧಿತ ಸುದ್ದಿ