ಬೆಂಗಳೂರು : ಕೇಂದ್ರ ದೆಹಲಿ ಹೈಕೋರ್ಟ್ ಗೆ ಅಫಿಡವಿಟ್ ವೊಂದನ್ನಾ ಸಲ್ಲಿಸಿದೆ ಇದೇ ವಿಚಾರಕ್ಕೆ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ 'ಪಿಎಂ ಕೇರ್ಸ್' ಮೂಲಕ ಜನರಿಂದ ಭಾವನಾತ್ಮಕವಾಗಿ ಹಣ ಲೂಟಿ ಮಾಡಿದೆ. PMCares ಮೂಲಕ ಸಂಗ್ರಹಿಸಿದ ಹಣ ಕೊರೊನಾ ನಿಭಾಯಿಸಲು ಬಳಕೆಯಾಗಬೇಕು. ಆದರೆ PMCaresನ ಹಣಕ್ಕೆ ಅಪ್ಪ ಅಮ್ಮನೆ ಇಲ್ಲದಿರುವುದು ಈಗ ಸಾಬೀತಾಗಿದೆ. ಹಾಗಾದರೆ ದೇಣಿಗೆ ರೂಪದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ಯಾರ ಉದ್ಧಾರಕ್ಕೆ?
ಪಾರದರ್ಶಕತೆ ಎನ್ನುವುದು ಭಾಷಣಕ್ಕೆ ಸೀಮಿತವಾದರೆ ಏನು ಪ್ರಯೋಜನ? ಅದು ಆಡಳಿತದಲ್ಲೂ ಇರಬೇಕು. ಜನ ಕೊರೊನಾ ಪೀಡಿತರಿಗೆ ನೆರವಾಗಲು ತಮ್ಮ ದುಡಿಮೆಯ ದುಡ್ಡನ್ನು PM Caresಗೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಈಗ ಆ ದುಡ್ಡು BJP ಯ ಸ್ವತ್ತಾಗಿದೆ. ಕೊರೊನಾದ ಹೆಸರಲ್ಲೂ ದುಡ್ಡು ಮಾಡುವ ಈ ಮನಃಸ್ಥಿತಿಗೆ ದಂಧೆ ಎನ್ನಬೇಕೋ? ಲೂಟಿ ಎನ್ನಬೇಕೋ?
ಪ್ರಧಾನಿಯವರ ಕರೆಗೆ ಓಗೊಟ್ಟು ಭಾರತೀಯರು PM Caresಗೆ ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ಈಗ ಅದು ಸರ್ಕಾರದ ನಿಧಿಯಲ್ಲ ಎಂದು ಕೇಂದ್ರ ಅಫಿಡವಿಟ್ ನೀಡಿದೆ. PM Cares ಸರ್ಕಾರದ ನಿಧಿಯಲ್ಲದಿದ್ದರೆ, ಪ್ರಧಾನ ಮಂತ್ರಿ ಹೆಸರಲ್ಲಿ ನಿಧಿ ಸ್ಥಾಪಿಸುವ ಉದ್ದೇಶವೇನಿತ್ತು? ಮೋದಿಯವರ ಹೆಸರಲ್ಲೇ ನಿಧಿ ಸ್ಥಾಪಿಸಿ ವಸೂಲಿ ಮಾಡಬಹುದಿತ್ತಲ್ಲವೆ?
ಪ್ರಧಾನ ಮಂತ್ರಿಗಳ ಹೆಸರಲ್ಲಿ ಸ್ಥಾಪಿತವಾದ PM Cares ಸರ್ಕಾರದ ನಿಧಿಯಲ್ಲ ಎಂಬ ಕೇಂದ್ರದ ವಾದ ಮೂರ್ಖತನದ್ದು. ಈ ವಾದವನ್ನು ಹೈಕೋರ್ಟ್ ಪುರಸ್ಕರಿಸಬಾರದು. ಪ್ರಧಾನ ಮಂತ್ರಿಯ ಸ್ಥಾನಕ್ಕೆ ಅದರದ್ದೇ ಆದ ಘನತೆ ಗೌರವವಿದೆ. ಆದರೆ ಪ್ರಧಾನಿ ಸ್ಥಾನದಲ್ಲಿ ಕುಳಿತವರಿಂದಲೇ ಆ ಸ್ಥಾನದ ಘನತೆಗೆ ಧಕ್ಕೆ ತಂದರೆ,ಅದು ಬೇಲಿಯೇ ಎದ್ದು ಹೊಲ ಮೇಯ್ದಂತಲ್ಲವೆ?
ಹೀಗೆ ಇವರು ಪ್ರಶ್ನಿಸಿರುವ ಪ್ರಶ್ನೆಗಳಿಗೆ ಅನೇಕರು ಬೆಂಬಲ ಸೂಚಿಸಿದ್ದಾರೆ.
PublicNext
23/09/2021 07:01 pm