ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ ಕೇಂದ್ರ ಸರ್ಕಾರದ ವಿರುದ್ಧ 11 ದಿನಗಳ ನಿರಂತರ ಪ್ರತಿಭಟನೆ

ನವದೆಹಲಿ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಸುಮಾರು 19 ವಿರೋಧ ಪಕ್ಷಗಳು ಸೋಮವಾರದಿಂದ ಪ್ರತಿಭಟನೆ ನಡೆಸಲಿವೆ. ಕೋವಿಡ್ ಮಾರ್ಗಸೂಚಿ ಪಾಲಿಸಿ ಪ್ರತಿಭಟನೆ ನಡೆಸಲು ಆಯಾ ಸಂಘಟನೆಗಳು ಹಾಗೂ ಪಕ್ಷಗಳು ರೂಪುರೇಷೆ ಸಿದ್ಧಪಡಿಸಿಕೊಂಡಿವೆ. ಸೆಪ್ಟೆಂಬರ್ ಅಂತ್ಯದವರೆಗೆ ಈ ಪ್ರತಿಭಟನೆಗಳು ಮುಂದುವರೆಯುತ್ತವೆ ಎಂದು ವಿರೋಧ ಪಕ್ಷಗಳು ತಿಳಿಸಿವೆ.

ಮೂರು ಹೊಸ ಕೃಷಿ ಶಾಸನಗಳನ್ನು ರದ್ದುಗೊಳಿಸುವುದು, ಪೆಗಾಸಸ್ ಹ್ಯಾಕಿಂಗ್ (Pegasus hacking )ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರ ಚುನಾವಣೆಗಳು ಮತ್ತು ಅಲ್ಲಿನ ಎಲ್ಲಾ ರಾಜಕೀಯ ಬಂಧಿತರನ್ನು ಬಿಡುಗಡೆ ಮತ್ತು ರಫೇಲ್ ಒಪ್ಪಂದದ ಬಗ್ಗೆ ಉನ್ನತ ಮಟ್ಟದ ತನಿಖೆ ಸೇರಿದಂತೆ ಬೇಡಿಕೆಗಳು ಸೇರಿವೆ.

Edited By : Nagaraj Tulugeri
PublicNext

PublicNext

20/09/2021 07:30 am

Cinque Terre

57.07 K

Cinque Terre

1

ಸಂಬಂಧಿತ ಸುದ್ದಿ