ಚಿತ್ರದುರ್ಗ : ರಾಜ್ಯದಲ್ಲಿ ದೇವಸ್ಥಾನ ತೆರವು ಮಾಡುವುದು ನಮ್ಮ ಉದ್ದೇಶವಲ್ಲ ಎಂದು ಸಚಿವ ಅಶ್ವಥ್ ನಾರಾಯಣ ತಿಳಿಸಿದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಸ್ಪಷ್ಟವಾಗಿ ಸೂಚನೆ ಕೊಟ್ಟಿದ್ದಾರೆ ಕಾನೂನು ಎಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದರು.
ಇನ್ನು ಗುಜರಾತ್ ಮಾದರಿಯ ಸಚಿವ ಸಂಪುಟ ಆಗಬೇಕು ಎಂಬ ರೇಣುಕಾಚಾರ್ಯ ಹೇಳಿಕೆ ವಿಚಾರ ಮಾತಾನಾಡಿದ ಅವರು ಅವರ ಅಭಿಪ್ರಾಯವನ್ನು ಅವರು ಹೇಳಿದ್ದಾರೆ. ಎಲ್ಲರಿಗೂ ಸಚಿವ ಸ್ಥಾನ ಸಿಗಬೇಕು ಎಂಬ ಅಭಿಪ್ರಾಯದಲ್ಲಿ ಹೇಳಿಕೆ ನೀಡಿದ್ದಾರೆ.ಯಾರೇ ಸಚಿವರಾದರೂ ಜನಪರವಾದ ಕೆಲಸ ಮಾಡಬೇಕು ಎಂದರು. ಕಾಂಗ್ರೆಸ್ ಸರ್ಕಾರ ಇದ್ದಾಗ ದೇವಸ್ಥಾನ ಕೆಡವಿದ್ದರೆ ಅದನ್ನೇ ಅಜೆಂಡಾ ಮಾಡಿಕೊಂಡು ಬಿಜೆಪಿಯವರು ಚುನಾವಣೆಗೆ ಹೋಗುತ್ತಿದ್ದರು ಎಂಬ ಟೀಕೆಗೆ ಪ್ರತಿಕ್ರಿಯೆ ನೀಡಿದರು.
2009ರ ನಂತರ ತಲೆ ಎತ್ತಿರುವ ದೇವಸ್ಥಾನ ತೆರವಿಗೆ ಆದೇಶ ಬಂದಿದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸರ್ಕಾರಗಳು ಇದ್ದಾಗಲೆಲ್ಲಾ ಅಫಿಡವಿಟ್ ಹಾಕಿದ್ದಾರೆ ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಹಿಂದುತ್ವ ವಿರೋಧಿಸಿದರೇ ಗಾಂಧೀಜಿಯನ್ನೇ ಬಿಟ್ಟಿಲ್ಲ, ನೀವು ಯಾವ ಲೆಕ್ಕ ಎಂದರು.
PublicNext
18/09/2021 09:29 pm