ಚಿತ್ರದುರ್ಗ : ಮೀನು ಕೃಷಿಕರಿಗೆ ಇಲ್ಲಿಯೇ ಮೀನು ಮರಿಗಳನ್ನು ಉತ್ಪಾದನೆ ಮಾಡಿಕೊಂಡು ಅವರ ಮೀನು ಕೃಷಿಗೆ ಪ್ರೋತ್ಸಾಹ ಕೊಡುವುದರಿಂದ ನಮ್ಮ ಮೀನುಗಾರಿಕೆಯ ಉತ್ಪಾದನೆಯು ಕೂಡ ಹೆಚ್ಚಾಗುತ್ತದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು. ಅವರು ಶುಕ್ರವಾರ ಸಂಜೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಮೀನುಮರಿ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಹೊರನಾಡು ಮೀನುಗಾರಿಕೆ ಸಂಬಂಧಿಸಿದಂತೆ ಮೀನುಮರಿ ಪಾಲನಾ ಕೇಂದ್ರ ಇಲ್ಲದೆ, ಉತ್ಪಾದನೆ ಕಡಿಮೆ ಆದಾಗ ಮಹಾರಾಷ್ಟ್ರ, ಆಂಧ್ರಪ್ರದೇಶದ ಬೇರೆ ಬೇರೆ ರಾಜ್ಯಗಳಿಂದ ಮೀನು ಮರಿಗಳನ್ನು ತಂದು ಕೊಡಲಾಗುತ್ತಿದೆ. ಇಲ್ಲಿಯೇ ಮೀನುಮರಿ ಉತ್ಪಾದನೆ ಮಾಡಿದರೆ ನಮ್ಮ ರಾಜ್ಯದಲ್ಲಿ ಉತ್ಪಾದನೆ ಹೆಚ್ಚಾಗಲು ಸಾಧ್ಯವಾಗುತ್ತದೆ ಎಂದರು. ನಾನು ಈ ಭಾಗಕ್ಕೆ ಬಂದು ವೀಕ್ಷಣೆ ಮಾಡಿದ ಸಮಯದಲ್ಲಿ ಸುಮಾರು 12 ಎಕರೆ ಜಾಗ ಜಮೀನು ಇದೆ. ಇಲ್ಲಿ 100 ಮೀನುಮರಿ ಉತ್ಪಾದನೆ ಕೊಳಗಳು ಇವೆ. ಇದರಲ್ಲಿ 40 ಕೊಳಗಳಲ್ಲಿ ಉತ್ಪಾದನೆ ನಡೆಯುತ್ತಿದ್ದು, ಉಳಿದ 60 ಕೊಳಗಳು ಹಾಳಾಗಿವೆ ಎಂದು ತಿಳಿಸಿದರು. ಈ ಕೊಳಗಳನ್ನು ದುರಸ್ಥಿ ಮಾಡಿದರೆ ಇಲ್ಲಿನ ಭಾಗದಲ್ಲಿ ಮೀನುಮರಿ ಉತ್ಪಾದನೆ ಹೆಚ್ಚಾಗುತ್ತದೆ ಎಂದು ಹೇಳಿದರು.
ಹಿರಿಯೂರು ಭಾಗದಲ್ಲಿ ನೀರಿನ ಸಮಸ್ಯೆಗಳಿವೆ. ಸಂಬಂಧಪಟ್ಟ ನೀರಾವರಿ ಸಚಿವರ ಜೊತೆ ಮಾತಾಡಿಕೊಂಡು ಕುಡಿಯುವ ನೀರಿಗೂ ಸಮಸ್ಯೆಯಾಗಂದತೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಪೂರ್ಣಿಮಾ ಮಂತ್ರಿ ಆಗ್ತಾರಾ : ಮೀನುಗಾರಿಕೆ ಸಚಿವ ಎಸ್ ಅಂಗಾರ ಅವರು ಮಾತನಾಡುವಾಗ ಬಾಯಿ ತಪ್ಪಿ ಮಾನ್ಯ ಸಚಿವರಾದ ಪೂರ್ಣಿಮಾಕ್ಕಗೆ ಭೇಟಿ ನೀಡುತ್ತೆನೆಂದು ಹೇಳಿದ್ದೆ ಎಂದರು. ಅಲ್ಲಿದ್ದವರು ಸಚಿವರು ಆಗಿಲ್ಲ ಸರ್ ಶಾಸಕರು ಎಂದಾಗ "ಮುಂದೆ ಸಚಿವರು ಆಗುತ್ತಾರೆ. ಹೇಳೋದಿಕ್ಕೆ ಆಗೋದಿಲ್ಲ, ಪೂರ್ಣಿಮಾ ಸಚಿವರು ಆಗಲೇಬೇಕು ಎಂದರು. ಪಕ್ಕದಲ್ಲೇ ಇದ್ದ ಶಾಸಕಿ ಕೆ ಪೂರ್ಣಿಮಾ ಸಚಿವರ ಮಾತಿಗೆ ಮುಗುಳ್ ನಕ್ಕ ಪ್ರಸಂಗ ನಡೆಯಿತು.
PublicNext
18/09/2021 11:46 am