ನವದೆಹಲಿ: ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪ್ರಧಾನಿಗಳು ಹಿಂದಿ ಬಾಷೆಯಲ್ಲಿ ಮಾತನಾಡಿದರೆ ಮುಜುಗರ ಪಡುವ ದಿನಗಳು ಈಗಿಲ್ಲ. ಆದರೂ ನಾವೇಕೆ ಆ ವಿಚಾರದಲ್ಲಿ ಹಿಂದೇಟು ಹಾಕುತ್ತಿದ್ದೇವೆ ? ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನೆ ಮಾಡಿದ್ದಾರೆ.
ನವದೆಹಲಿ ವಿಜ್ಞಾನ ಭವನದಲ್ಲಿಂದು “ಹಿಂದಿ ದಿವಸ್‌ಸಮಾರಂಭ 2021”ದಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ಆತ್ಮ ನಿರ್ಭರ ಎಂದರೆ ದೇಶದಲ್ಲಿಯೇ ಉತ್ಪಾದನೆ ಮಾಡುವುದು ಮಾತ್ರವಲ್ಲ, ಭಾಷೆಯ ವಿಷಯದಲ್ಲೂ ನಾವು ಸ್ವಾವಲಂಬಿಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆ ನೀಡಿದ್ದಾರೆ.
ಹಿಂದಿಯಲ್ಲಿ ಮಾತನಾಡುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ. ಜನರು ತಮ್ಮ ಮಾತೃಭಾಷೆಯೊಂದಿಗೆ ಅಧಿಕೃತ ಭಾಷೆಯಾಗಿ ಹಿಂದಿಯನ್ನು ಹಂತ ಹಂತವಾಗಿ ಬಳಸುವ ಪ್ರತಿಜ್ಞೆ ಮಾಡಬೇಕು. ಮಾತೃ ಬಾಷೆ ಹಾಗೂ ಅಧಿಕೃತ ಭಾಷೆಗಳ ಸಮನ್ವಯದಲ್ಲಿ ದೇಶದ ಅಭಿವೃದ್ದಿ ಅಡಗಿದೆ ಎಂದರು.
PublicNext
15/09/2021 12:01 pm