ಚಿತ್ರದುರ್ಗ : ಜನರು ಕಾಂಗ್ರೆಸ್ ಪರವಾಗಿ ಇದ್ದಿದ್ರೆ ಯಾಕೆ ಅವರನ್ನು ಮನೆಯಲ್ಲಿ ಕೂರಿಸುತ್ತಿದ್ದರು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಬಳಿ ರೈತರಿಗೊಂದು ದಿನ ಕಾರ್ಯಕ್ರಮದಲ್ಲಿ ಮಾತಾನಾಡುತ್ತ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಜನರಿಗೆ ಕಾಂಗ್ರೆಸ್ ಬಗ್ಗೆ ವಿರೋಧವಿದೆ ಮತ್ತೆ ಜನರ ವಿಶ್ವಾಸಗಳಿಸುವುದು ಸಾಧ್ಯವಿಲ್ಲ , 2023 ರ ಚುನಾವಣೆಯಲ್ಲಿಯೂ ನಾವೇ ಗೆದ್ದು ಅಧಿಕಾರ ಮಾಡುತ್ತೇವೆ ಎಂದು ಕೃಷಿ ಸಚಿವರು ತಿಳಿಸಿದರು.
ಇನ್ನು ನಿಫಾ ವೈರಸ್ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಕೇರಳದಿಂದ ಬರುವವರು ನೆಗೆಟಿವ್ ವರದಿ ಇಲ್ಲದೆ ಯಾರೂ ಬಾರದಂತೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಯಾವುದೇ ರೈತ ವಿರೋಧಿ ಕಾಯ್ದೆಗಳು ಇಲ್ಲ. ರೈತರಿಗೆ ಎಂಎಸ್ ಪಿಯನ್ನು ಕೂಡ ಉತ್ತಮವಾಗಿ ಕೊಡಲಾಗುತ್ತಿದೆ.ರೈತರು ಲಾಭವನ್ನು ಪಡೆಯುತ್ತಿದ್ದಾರೆ.
ರೈತರಿಗೆ ಎಲ್ಲಿ ಬೇಕಾದರೂ ಬೆಳೆಯನ್ನು ಮಾರಲು ಅವಕಾಶ ನೀಡಿದ್ದೇವೆ. ಇದು ರೈತ ವಿರೋಧಿ ನೀತಿಯಲ್ಲ ಎಂದರು
ಮತ್ತೊಂದು ಕಡೆ ಉಡುಪಿಯಲ್ಲಿ ನಡೆಯುತ್ತಿರುವ ಮತಾಂತರ ಕುರಿತು ಮಾತನಾಡಿದ ಇವರು, ಮತಾಂತರ ಮಾಡುವುದು ಅಕ್ಷಮ್ಯ ಅಪರಾಧ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು. ಬಿಜೆಪಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಬಿ.ಸಿ ಪಾಟೀಲ್ ಮೇಲೆ ಭ್ರಷ್ಟಾಚಾರದ ಆರೋಪ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಯಾಕೆ ಕಾಂಗ್ರೆಸ್ ನಲ್ಲಿ ಭ್ರಷ್ಟಾಚಾರ ಇಲ್ಲವೇ, ಸಿದ್ದರಾಮಯ್ಯ ಅವರ ಮೇಲೆ ಭ್ರಷ್ಟಾಚಾರದ ಆರೋಪ ಬಂದಿರಲಿಲ್ಲವೆ?ಎಂದು ಪ್ರಶ್ನಿಸಿದರು.
ಸಿಲ್ವರ್ ಬ್ರಿಡ್ಜ್ ಮಾಡುವಾಗ 500 ಕೋಟಿ ಕಿಕ್ ಬ್ಯಾಕ್ ತೆಗೆದುಕೊಂಡಿದ್ದಾರೆ ಎಂಬ ಆರೋಪ ಬಂದಿತ್ತಲ್ಲ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಇವರು,ಆರೋಪ ಮಾಡುವವರು ಇದ್ದೇ ಇರುತ್ತಾರೆ ಎಂದು ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದರು. ಇದರ ಬಗ್ಗೆ ಯಾವುದೇ ತನಿಖೆ ಆಗಲಿ ನಾವು ಉತ್ತರ ಕೊಡಲು ಸಿದ್ದರಿದ್ದೇವೆ.
ಎಲ್ಲವೂ ಆನ್ ಲೈನ್ ಟೆಂಡರ್ ಆಗುತ್ತಿದೆ ಟೆಂಡರ್ ದಾರ ಆನ್ ಲೈನ್ ನಲ್ಲಿ ಅರ್ಜಿ ಹಾಕಿ ಹಣ ಕಟ್ಟುತ್ತಾನೆ. ಆನ್ ಲೈನ್ ನಲ್ಲಿ ಕಂಪನಿಗಳಿಗೆ ಹಣ ಹೋಗುತ್ತದೆ ಇಲ್ಲಿ ಎಲ್ಲವೂ ಪಾರದರ್ಶಕತೆ ಇರುತ್ತದೆ ಎಂದು ಕೃಷಿ ಸಚಿವರು ತಿಳಿಸಿದರು.
PublicNext
11/09/2021 11:12 am