ಉಡುಪಿ: ಕಾಂಗ್ರೆಸ್ ನಲ್ಲಿ ಯಾವ ಗುಂಪುಗಾರಿಕೆಯೂ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಜಿ.ಪರಮೇಶ್ವರ್ ಹೇಳಿದ್ದಾರೆ.ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ,ಕಾಂಗ್ರೆಸ್ ನಲ್ಲಿ ಯಾವ ಗುಂಪುಗಾರಿಕೆಯೂ ಇಲ್ಲ.ಇಂತಹ ಸುದ್ದಿಯನ್ನು ಯಾರೋ ಸೃಷ್ಟಿ ಮಾಡುತ್ತಿದ್ದಾರೆ.ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರಿಗೂ ಪಕ್ಷದ ಜವಾಬ್ದಾರಿಯಿದೆ.ಗುಂಪುಗಾರಿಕೆ ಮಾಡುವ ಅವಕಾಶ ಕಾಂಗ್ರೆಸ್ ನಲ್ಲಿ ಇಲ್ಲ.ಕಾಂಗ್ರೆಸ್ ನಲ್ಲಿ ಬಾಗಿಲುಗಳ ಕಲ್ಪನೆ ಯಾರದ್ದೋ ಸೃಷ್ಟಿ.ಪಕ್ಷ ಸಂಘಟನೆ ಮಾಡುವಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಜವಾಬ್ದಾರಿಯಿದೆ ಎಂದು ಹೇಳಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಡಿಕೆಶಿ- ಸಿದ್ದರಾಮಯ್ಯ ಹೆಚ್ಚು ಭಾಗವಹಿಸಿಲ್ಲ.ಇದು ಚರ್ಚಿಸಬೇಕಾದ ದೊಡ್ಡ ವಿಚಾರ ಅಲ್ಲ.ಸ್ಥಳೀಯ ನಾಯಕರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ.ನನ್ನ ಅವಶ್ಯಕತೆ ಇದ್ದಲ್ಲಿ ನಾನು ಕೆಲಸ ಮಾಡುತ್ತೇನೆ.
ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಉಡುಪಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ.
PublicNext
07/09/2021 02:16 pm