ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಅರುಣ್‌ಸಿಂಗ್ ಕೇಂದ್ರದ ದಲ್ಲಾಳಿ': ಹೆಚ್​ಡಿಕೆ ಕಿಡಿ

ಮೈಸೂರು: ಬಿಜೆಪಿ ರಾಜ್ಯ ಅರುಣ್‌ಸಿಂಗ್ ಕೇಂದ್ರ ಸರ್ಕಾರದ ದಲ್ಲಾಳಿ. ಅವರಿಗೆ ಇಲ್ಲಿಯ ರಾಜಕಾರಣ ಗೊತ್ತಿಲ್ಲ. ಇಲ್ಲಿಗೆ ಬಂದಿರೋದು ದುಡ್ಡು ಕಲೆಕ್ಷನ್​ಗಾಗಿ ಮಾತ್ರ ಎಂದು ಜೆಡಿಎಸ್ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನ ಮುಳುಗುತ್ತಿರುವ ಹಡಗು ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಅವರಿಗೆ ಗೊತ್ತಿಲ್ಲ, ಮುಳುಗುತ್ತಿರುವುದು ಬಿಜೆಪಿ ಪಕ್ಷ ಎಂದು. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಬೇಡಿ, ರಾಜ್ಯಕ್ಕೆ ಬರುವ ಇಂತಹ ದಲ್ಲಾಳಿಗಳಿಗೆ ಇಲ್ಲಿನ ವಾಸ್ತವವನ್ನು ರಾಜ್ಯ ಬಿಜೆಪಿ ನಾಯಕರುಗಳು ತಿಳಿ ಹೇಳಬೇಕು ಎಂದು ಕಿಡಿಕಾರಿದ್ದಾರೆ.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ​ಸಿಂಗ್​ ಮೊದಲು ಕನ್ನಡನಾಡಿನ ಸಮಸ್ಯೆಗಳ ಆಲಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿ. ಅದು ಅವರ ಕರ್ತವ್ಯ, ಅದನ್ನು ಬಿಟ್ಟು ಕೇವಲ ಸೂಟ್​ಕೇಸ್ ತೆಗೆದುಕೊಂಡು ಹೋದ್ರೆ ಆಗಲ್ಲ. ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿದ್ವಾ? ಪಾಲಿಕೆ ಮೇಯರ್​ ವಿಚಾರವಾಗಿ ಅರ್ಧ ರಾತ್ರಿಯಲ್ಲಿ ಮೈಸೂರಿನ ಸಾ.ರಾ.ಮಹೇಶ್‌ ಮನೆಗೆ ಬಂದಿದ್ದು ಯಾರು? ಜೆಡಿಎಸ್ ಬಗ್ಗೆ ಮಾತನಾಡಿದವರು ಯಾರ್ಯಾರು ಏನೇನಾಗಿದ್ದಾರೆ ಅಂತ ಇತಿಹಾಸ ಇದೆ. ಜೆಡಿಎಸ್‌ನ ಫ್ಯೂಸ್ ಕೀಳಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್‌ ಗ್ರೌಂಡಿಂಗ್ ಬಹಳ ಭದ್ರವಾಗಿದೆ ಎಂದು ಹೇಳಿದರು.

Edited By : Vijay Kumar
PublicNext

PublicNext

01/09/2021 04:36 pm

Cinque Terre

22.69 K

Cinque Terre

4

ಸಂಬಂಧಿತ ಸುದ್ದಿ