ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುರ್ತು ಪರಿಸ್ಥಿತಿ ವೇಳೆ ಜೈಲಿನಲ್ಲಿದ್ದೆ, ಬೀಡಿ ತರಿಸಿಕೊಳ್ಳಲು ಎಷ್ಟು ಹಣ ಕೊಡಬೇಕು ಗೊತ್ತಿದೆ: ಗೃಹ ಸಚಿವ

ಚಿಕ್ಕಮಗಳೂರು: 1975ರಲ್ಲಿ ಎಮರ್ಜೆನ್ಸಿ ಟೈಮಲ್ಲಿ ಆರು ತಿಂಗಳು ಜೈಲಿನಲ್ಲಿ ಖೈದಿಯಾಗಿದ್ದೆ. ಹೊರಗಿನಿಂದ ಒಳಗೆ ಒಂದು ಬೀಡಿ ತರಿಸಿಕೊಳ್ಳಲು ಎಷ್ಟು ಹಣ ಕೊಡಬೇಕು? ಅಲ್ಲಿ ಏನಿರುತ್ತೆ? ಏನಿರಲ್ಲ? ಎಲ್ಲವೂ ಗೊತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಜೈಲಲ್ಲಿ ಊಟ ಸರಿ ಇರಲ್ಲ. ಕೆಮಿಕಲ್ ಹಾಕಿ ಕೊಡುತ್ತಾರೆ ಎಂದು ಖೈದಿ ಬರಿದಿದ್ದಾರೆ ಎನ್ನಲಾದ ಪತ್ರದ ಸಂಬಂಧ ಜಿಲ್ಲೆಯ ತರೀಕೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈ ಪತ್ರವನ್ನು ಖೈದಿಯೇ ಬರೆದಿದ್ದಾರೋ ಅಥವಾ ಯಾರು ಬರೆದಿದ್ದಾರೋ ಗೊತ್ತಿಲ್ಲ. ಆದರೆ ನನ್ನ ಫೋನಿಗೂ ಬಂದಿದೆ. ನಾನು ಪರಪ್ಪನ ಅಗ್ರಹಾರ ಜೈಲಿಗೆ ಸಂದರ್ಶನ ಮಾಡಲು ಹೋಗಿದ್ದೆ. ಸುಮಾರು ಎರಡು-ಮೂರು ಗಂಟೆ ಇಡೀ ಜೈಲು ಸುತ್ತಿದ್ದೇನೆ. ಅಲ್ಲಿರುವವರ ಜೊತೆ ಮಾತನಾಡಿದ್ದೇನೆ. ಎಲ್ಲಾ 100 ಪರ್ಸೆಂಟ್ ಸರಿ ಎಂದು ನಾನು ಹೇಳಲ್ಲ. ಸಣ್ಣಪುಟ್ಟ ನ್ಯೂನ್ಯತೆಗಳಿವೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿ ಎಚ್ಚರಿಕೆ ಕೊಟ್ಟು ಬಂದಿದ್ದೇನೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

01/09/2021 10:02 am

Cinque Terre

32.1 K

Cinque Terre

7