ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದ ಆಸ್ತಿ ಮೋದಿಗೆ ಸೇರಿದ್ದಲ್ಲ: ಪ್ರಧಾನಿ ವಿರುದ್ಧ ದೀದಿ ಕಿಡಿ

ಕೋಲ್ಕತ್ತಾ: ದೇಶದ ಆಸ್ತಿ ಸಾರ್ವಜನಿಕರಿಗೆ ಸೇರಿದ್ದು, ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿಯದ್ದಲ್ಲ. ಕೇಂದ್ರ ಸರ್ಕಾರವು ತಮ್ಮ ಇಚ್ಛೆಯಂತೆ ದೇಶದ ಆಸ್ತಿ ಮಾರಾಟ ಮಾಡುವಂತಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ರಾಷ್ಟ್ರೀಯ ನಗದೀಕರಣ ಯೋಜನೆ ಆಘಾತಕಾರಿ ನೀತಿ. ಬಿಜೆಪಿ ದೇಶದ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ. ಇದರಿಂದ ಸಿಗುವ ಹಣವನ್ನು ಚುನಾವಣೆಗಳಲ್ಲಿ ವಿರೋಧ ಪಕ್ಷಗಳ ವಿರುದ್ಧ ಬಳಕೆ ಮಾಡುತ್ತದೆ. ಅದಕ್ಕಾಗಿಯೇ ರಾಷ್ಟ್ರೀಯ ನಗದೀಕರಣ ಯೋಜನೆ ಜಾರಿ ಮಾಡಲಾಗಿದೆ" ಎಂದು ಆರೋಪಿಸಿದ್ದಾರೆ.

ದೇಶದ ಆಸ್ತಿ ಮಾರಾಟ ಮಾಡಲು ಹೊರಟ ಬಿಜೆಪಿಗೆ ನಾಚಿಕೆಯಾಗಬೇಕು. ರಾಷ್ಟ್ರದ ಆಸ್ತಿ ಮಾರಾಟ ಮಾಡುವ ಹಕ್ಕು ಬಿಜೆಪಿಗೆ ಯಾರೂ ನೀಡಿಲ್ಲ. ಈ ಜನವಿರೋಧಿ ನೀತಿ ವಿರುದ್ಧ ಇಡೀ ದೇಶ ಹೋರಾಡಬೇಕಿದೆ ಎಂದರು.

Edited By : Vijay Kumar
PublicNext

PublicNext

26/08/2021 07:30 am

Cinque Terre

46.97 K

Cinque Terre

10

ಸಂಬಂಧಿತ ಸುದ್ದಿ