ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಲೂ ಜೀ ಹೇಗಿದ್ದಾರೆ?: ತೇಜಸ್ವಿ ಯಾದವ್‌ರನ್ನು ಕೇಳಿದ ಪ್ರಧಾನಿ ಮೋದಿ

ನವದೆಹಲಿ: ಲಾಲೂ ಜೀ ಹೇಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಜನತಾ ಪಕ್ಷ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.

ಹೌದು. ಜಾತಿವಾರು ಜನಗಣತಿಯ ಬೇಡಿಕೆಯ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ತೇಜಸ್ವಿ ಯಾದವ್ ಸೇರಿದಂತೆ ಬಿಹಾರದ ನಿಯೋಗವು ನಿನ್ನೆ (ಸೋಮವಾರ) ಪ್ರಧಾನಿ ಮೋದಿ ಅವರನ್ನು ಭೇಟಿಯಾಯಿತು. ಈ ವೇಳೆ ಪ್ರಧಾನಿ ಮೋದಿ, ಆರ್‌ಜೆಡಿ ವರಿಷ್ಠ ಲಾಲು ಯಾದವ್ ಅವರ ಆರೋಗ್ಯ ಹೇಗಿದೆ ಎಂದು ಕೇಳುವ ಮೂಲಕ ತಮ್ಮ ಮಾತು ಆರಂಭಿಸಿದರು ಎಂದು ವರದಿ ಮಾಡಿದೆ.

ಲಾಲೂ ಪ್ರಸಾದ್ ಅವರು ಭ್ರಷ್ಟಾಚಾರಕ್ಕಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಗ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಎಪ್ರಿಲ್‌ನಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಅವರು ತಮ್ಮ ಶಿಕ್ಷೆಯ ಬಹುಭಾಗವನ್ನು ಜಾರ್ಖಂಡ್‌ನ ರಾಂಚಿಯ ಜೈಲು ಆಸ್ಪತ್ರೆಯಲ್ಲಿ ಕಳೆದಿದ್ದಾರೆ.

73 ವರ್ಷದ ಲಾಲೂ ಪ್ರಸಾದ್ ಯಾದವ್ ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಪದೇ ಪದೇ ಹೋಗಿ, ಬರುತ್ತಿದ್ದಾರೆ. ಅವರು ಮೂತ್ರಪಿಂಡ ಹಾಗೂ ಹೃದಯದ ಸಮಸ್ಯೆಗಳು ಸೇರಿದಂತೆ ಇತರ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ, "ಲಾಲೂ ಜೀ ಹೇಗಿದ್ದಾರೆ" ಎಂದು ತೇಜಸ್ವಿ ಯಾದವ್ ಅವರನ್ನು ಪ್ರಧಾನಿ ಮೋದಿ ಕೇಳಿದ್ದಾರೆ. ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ ಎಂದು ವರದಿ ತಿಳಿಸಿದೆ.

Edited By : Vijay Kumar
PublicNext

PublicNext

24/08/2021 01:00 pm

Cinque Terre

31.72 K

Cinque Terre

1

ಸಂಬಂಧಿತ ಸುದ್ದಿ