ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂತ್ರಿಗಿರಿಗೆ ಇಂದು ಆನಂದ್ ಸಿಂಗ್ ರಾಜೀನಾಮೆ.?

ಬೆಂಗಳೂರು: ಪ್ರಬಲ ಖಾತೆ ವಿಚಾರಕ್ಕೆ ಅಸಮಾಧಾನಗೊಂಡಿರುವ ಪರಿಸರ, ಜೀವಶಾಸ್ತ್ರ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಆನಂದ ಸಿಂಗ್​ ಇಂದು ತಮ್ಮ ಮಂತ್ರಿಗಿರಿಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ ಎಂಬ ಮಾಹಿತಿ ಲಭಿಸಿದೆ.

ಆನಂದ್ ಸಿಂಗ್ ಅವರು ಖಾತೆ ಬದಲಾವಣೆ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಖಾತೆ ಬದಲಾವಣೆ ಮಾಡಿ ಕೊಡುವಂತೆ ಪಟ್ಟು ಹಿಡಿದು ವೈಲೆಂಟ್​ ಆಗಿದ್ದ ಸಚಿವ, ಪ್ರಮಾಣ ವಚನ ಸ್ವೀಕರಿಸಿ 20 ದಿನ ಕಳೆದಿದ್ದರು ವಿಧಾನಸೌಧಕ್ಕೆ ಆಗಮಿಸಿರಲಿಲ್ಲ. ಅಷ್ಟೇ ಅಲ್ಲದೆ ಅಲ್ಲದೇ ಇಲಾಖೆ ಜವಾಬ್ದಾರಿ ವಹಿಸಿಕೊಂಡು ಸಭೆಯನ್ನು ನಡೆಸಿರಲಿಲ್ಲ. ಹೀಗಿದ್ದರೂ ಖಾತೆ ಬದಲಾವಣೆಯಾಗದ ಕಾರಣ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಆನಂದ್ ಸಿಂಗ್ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Edited By : Vijay Kumar
PublicNext

PublicNext

24/08/2021 12:23 pm

Cinque Terre

52.62 K

Cinque Terre

22

ಸಂಬಂಧಿತ ಸುದ್ದಿ