ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಡಿನ ಸದ್ದು ಮಾಡಿ, ಸ್ವಾಗತಿಸುತ್ತಾರೆ, ಮುಂದೆ ಇನ್ಯಾರ್ಮೇಲೆ ಗುಂಡು ಹಾರಿಸುತ್ತಾರೋ ಗೊತ್ತಿಲ್ಲ : ವಿ.ಎಸ್. ಉಗ್ರಪ್ಪ

ಚಿತ್ರದುರ್ಗ : ಅತ್ಯಂತ ಹಿಂದುಳಿದ ಸಮಾಜದವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತ ಪಕ್ಷ ಏನಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು. ಅತಿಸಣ್ಣ ಸಮಾಜದಿಂದ ಬಂದ ದೇವರಾಜ ಅರಸು, ವೀರಪ್ಪ ಮೈಲಿ, ಬಂಗಾರಪ್ಪ, ಧರ್ಮಸಿಂಗ್ ಅಂತವರನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಯನ್ನಾಗಿ ಮಾಡಿದೆ ಎಂದು ತಿಳಿಸಿದರು. ಇತ್ತೀಚಿಗೆ ಕೇಂದ್ರ ಸಚಿವರೊಬ್ಬರನ್ನು ಗುಲ್ಬುರ್ಗಕ್ಕೆ ಸ್ವಾಗತ ಮಾಡುವ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಅಮಲಿನಲ್ಲಿ ನಾಡ ಬಂದುಕುಗಳನ್ನು ಬಳಸಿ ಗುಂಡುಗಳನ್ನು ಗಾಳಿಯಲ್ಲಿ ಹಾರಿಸುವ ಮೂಲಕ ಸ್ವಾಗತ ಮಾಡುತ್ತಾರೆ. ಪಕ್ಷದ ಕಾರ್ಯಕರ್ತರು ಮಾಡಿದ ತಪ್ಪನ್ನು ಗೃಹ ಸಚಿವರು ಸಮರ್ಥಿಸಿಕೊಂಡಿದ್ದು ಇದು ನಾಚಿಕೆಗೇಡಿನ ವಿಷಯವಾಗಿದೆ ಎಂದರು. ಕರ್ನಾಟಕ ಶಾಂತಿಪ್ರಿಯ ರಾಜ್ಯ, ಇಂತಹ ನಾಡಿನಲ್ಲಿ ಗುಂಡಿನ ಸದ್ದಿನ ಮೂಲಕ ಬಿಜೆಪಿ ಯವರು ಸ್ವಾಗತ ಮಾಡುತ್ತಾರೆ ಇವರು ಮುಂದೆ ಇನ್ಯಾರ ಮೇಲೆ ಗುಂಡು ಹಾರಿಸುತ್ತಾರೆ ಗೊತ್ತಿಲ್ಲ ಎಂದು ಬಿಜೆಪಿ ವಿರುದ್ಧ ಉಗ್ರಪ್ಪ ಗುಡುಗಿದರು.

Edited By : Nagesh Gaonkar
PublicNext

PublicNext

22/08/2021 10:51 pm

Cinque Terre

104.48 K

Cinque Terre

10

ಸಂಬಂಧಿತ ಸುದ್ದಿ